ರಾಯಚೂರು: ಈಟಿವಿ ಭಾರತ ಪ್ರಕಟಿಸಿದ ಸುದ್ದಿಯಿಂದ ಎಚ್ಚೆತ್ತ ಸಾರಿಗೆ ಇಲಾಖೆ ಅಧಿಕಾರಿಗಳು, ಸಿಂಧನೂರು - ಹಂಚಿನಾಳ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ.
ಈ ಹಿಂದೆ ಸಿಂಧನೂರಿನಿಂದ ನಂಜಲದಿನ್ನಿ ಗ್ರಾಮಕ್ಕೆ ನಿತ್ಯ ಒಂದು ಸಾರಿಗೆ ಬಸ್ ಮಾತ್ರ ಸಂಚರಿಸುತ್ತಿತ್ತು. ಹಂಪನಾಳ, ಹಂಚಿನಾಳ (ಯು), ಕೊಂಬಾಳ, ಮುದ್ದಾಪುರ ಸೇರಿದಂತೆ ಸುಮಾರು 13 ಹಳ್ಳಿಗಳ ಮಾರ್ಗವಾಗಿ ಬರುವ ಈ ಬಸ್ನಲ್ಲಿಯೇ ನೂರಾರು ವಿದ್ಯಾರ್ಥಿಗಳು ಕಾಲೇಜಿಗೆ ತೆರಳುತ್ತಿದ್ದರು. ಒಂದೊಂದು ದಿನ ಈ ಬಸ್ನಲ್ಲೂ ಜಾಗವಿಲ್ಲದೇ, ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು.