ರಾಯಚೂರು: ಮಾನ್ವಿ ತಾಲೂಕಿನ ಕರೆಗುಡ್ಡದಲ್ಲಿ ಗ್ರಾಮ ವಾಸ್ತವ್ಯಕ್ಕೆ ತೆರಳಲು ಸಾರಿಗೆ ಬಸ್ ವಿಶೇಷ ಅಲಂಕಾರದಿಂದ ಸಿದ್ಧಗೊಂಡಿದೆ.ಸುದ್ದಿಗೋಷ್ಟಿ ನಡೆಸಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಬಳಿಕ ಕರೆಗುಡ್ಡಕ್ಕೆ ತೆರಳಲಿದ್ದಾರೆ.
ಇನ್ನು ಕರೆಗುಡ್ಡದಲ್ಲಿ ಸಿಎಂ ಕಾರ್ಯಕ್ರಮಕ್ಕೆ ಬೃಹತ್ ವೇದಿಕೆ ಸಜ್ಜಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಕರೇಗುಡ್ಡದಲ್ಲಿ ಜೆಡಿಎಸ್ ಕಾರ್ಯಕರ್ತರು ಗ್ರಾಮದ ಮಹಿಳೆಯರಿಗೆ ಹಸಿರು ಸೀರೆ, ಕಳಸಾ, ತೆಂಗಿನಕಾಯಿ, ಟವೆಲ್ ವಿತರಿಸಿದ್ದಾರೆ. ಗ್ರಾಮಕ್ಕೆ ಅಗಮಿಸಲಿರುವ ಸಿಎಂ ಕುಮಾರಸ್ವಾಮಿ ಅವರನ್ನು ಸ್ವಾಗತಿಸಲು ಮಹಿಳೆಯರು ಹಸಿರು ಸೀರೆ ಉಟ್ಟು, ಕುಂಭ ಮೇಳಗಳೊಂದಿಗೆ ತಯಾರಾಗಿದ್ದಾರೆ.
ಕರೆಗುಡ್ಡಕ್ಕೆ ತೆರಳುವ ಮೊದಲು ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಟಿ ನಡೆಸಲಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ, ಭರಪುರ ಅನುದಾನ, ಸತತವಾಗಿ ಬರಗಾಲ ಆವರಿಸುತ್ತಿರುವ ಜಿಲ್ಲೆಗೆ ಶಾಶ್ವತ ಪರಿಹಾರ ನೀಡಬಹುದೆಂದು ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.