ರಾಯಚೂರು: ಪುರಾತನ ದೇವಾಲಯದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಪಂಚಲೋಹದ ಉತ್ಸವ ಮೂರ್ತಿ ಕಳ್ಳತನವಾಗಿರುವ ಘಟನೆ ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರಿನಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಮಾರಟೇಶ್ವರ ದೇಗುಲದಲ್ಲಿ ಪಂಚಲೋಹದ ಉತ್ಸವ ಮೂರ್ತಿ ಕಳವು - Siravara police station
ಪಂಚಲೋಹದ ಮೂರ್ತಿಗೆ ಭಾರಿ ಬೇಡಿಕೆ ಹಾಗೂ ಬೆಲೆಯಿರುವ ಕಾರಣ ಕಳ್ಳತನವಾಗಿದೆ ಎಂಬ ಸಂಶಯ ವ್ಯಕ್ತವಾಗಿದೆ. ಈ ಸಂಬಂಧ ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ರಾಯಚೂರಿನ ಮಾರಟೇಶ್ವರ ದೇಗುಲದಲ್ಲಿ ಪಂಚಲೋಹದ ಉತ್ಸವ ಮೂರ್ತಿ ಕಳವು
ಗ್ರಾಮದ ಶ್ರೀಮಾರಟೇಶ್ವರ ದೇಗುಲದ ಬಾಗಿಲು ಮುರಿದು ಶಿವ-ಪಾರ್ವತಿಯರ ಉತ್ಸವ ಮೂರ್ತಿ ಕಳ್ಳತನ ಮಾಡಲಾಗಿದೆ. ಇದು ಸುಮಾರು 15 ಕೆಜಿ ತೂಕದ 500 ವರ್ಷಗಳಷ್ಟು ಪುರಾತನ ಪಂಚಲೋಹದ ಉತ್ಸವ ಮೂರ್ತಿಯಾಗಿದೆ.
ಪಂಚಲೋಹದ ಮೂರ್ತಿಗೆ ಭಾರಿ ಬೇಡಿಕೆ ಹಾಗೂ ಬೆಲೆಯಿರುವ ಕಾರಣ ಕಳ್ಳತನವಾಗಿದೆ ಎಂಬ ಸಂಶಯ ವ್ಯಕ್ತವಾಗಿದೆ. ಈ ಸಂಬಂಧ ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Feb 14, 2021, 4:01 PM IST