ರಾಯಚೂರು:ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸುವ ವೇಳೆ ಲಿಂಗಸ್ಗೂರು ತಾಲೂಕಿನ ರಾಮಾಜೀ ನಾಯ್ಕ ತಾಂಡಾದಲ್ಲಿ ಸಾರ್ವಜನಿಕರಿಂದ ಮಾಹಿತಿ ಪಡೆದ ನಂತರ ಆಕ್ರೋಶಗೊಂಡ ಮಾಜಿ ಸಿಎಂ ಬಿಎಸ್ವೈ ತಹಶೀಲ್ದಾರ್ ಚಂದ್ರಶೇಖರ್ಗೆ ಕಪಾಳಕ್ಕೆ ಹೊಡೆಯುವುದಾಗಿ ಹೇಳಿದ್ದರು. ಆದರೆ, ಬಳಿಕ ಆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ತಹಶೀಲ್ದಾರ್ಗೆ ಕಪಾಳಕ್ಕೆ ಹೊಡೆಯುವೆ ಅಂದ್ರು.. ಆ ಮೇಲೆ ತಪ್ಪಿನ ಅರಿವಾಗಿ ವಿಷಾದ ವ್ಯಕ್ತಪಡಿಸಿದ ಯಡಿಯೂರಪ್ಪ.. - undefined
ಬರ ಅಧ್ಯಯನ ನಡೆಸುವ ವೇಳೆ ತಹಶೀಲ್ದಾರ್ ಚಂದ್ರಶೇಖರ್ಗೆ ಕಪಾಳಕ್ಕೆ ಹೊಡೆಯುವುದಾಗಿ ಹೇಳಿದ್ದ ಬಿಎಸ್ವೈ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಇದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.
ರಾಮಾಜೀ ನಾಯ್ಕ ತಾಂಡಾದಲ್ಲಿ ನೀರಿನ ಸಮಸ್ಯೆ ಮತ್ತು ಉದ್ಯೋಗ ಖಾತ್ರಿ ಯೋಜನೆ ಕುರಿತು ಸಾರ್ವಜನಿಕರು ದೂರನ್ನು ನೀಡಿದಾಗ, ಆಕ್ರೋಶಗೊಂಡ ಯಡಿಯೂರಪ್ಪ ಲಿಂಗಸೂಗೂರು ತಹಶೀಲ್ದಾರ್ ಚಂದ್ರಶೇಖರ್ಗೆ ಕಪಾಳಕ್ಕೆ ಹೊಡೆಯುವುದಾಗಿ ಹೇಳಿದ್ದರು. ಆದರೆ, ಮಾಧ್ಯಮಗಳಲ್ಲಿ ಎಲ್ಲಿ ಇದು ಸುದ್ದಿಯಾಗುತ್ತೋ ಏನೋ ಅಂತಾ ತಾವೇ ಪತ್ರಕರ್ತರ ಎದುರಿಗೆ ವಿಷಾದಿಸಿದ್ದಾರೆ. ಜತೆಗೆ ಈ ವಿಷಯವನ್ನು ದೊಡ್ಡದಾಗಿ ಮಾಡ್ಬಾರದು ಎಂದು ಮಾಧ್ಯಮದವರಿಗೆ ಮನವಿ ಮಾಡಿದರು.
ನಂತರ ಲಿಂಗಸೂಗೂರು ಪ್ರವಾಸಿ ಮಂದಿರದಲ್ಲಿ ಬರ ನಿರ್ವಹಣೆ ಕುರಿತು ಅಧಿಕಾರಿಗಳ ಸಭೆ ನಡೆಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ ಅಲ್ಲಿನ ಜನರ ಸಮಸ್ಯೆ ಆಲಿಸಿದಾಗ, ಅಧಿಕಾರಿಗಳ ನಿರ್ಲಕ್ಷ್ಯ ನೋಡಿ ತಹಶೀಲ್ದಾರ್ಗೆ ಹಾಗೆ ಬೈದಿದ್ದೇನೆ, ಇದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.