ರಾಯಚೂರು: ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು ಭಾರಿ ಅವಾಂತರ ಸೃಷ್ಟಿಯಾಗಿದೆ. ಸೇತುವೆಯೊಂದು ಕುಸಿದಿದ್ದು, ಸಿರವಾರ ತಾಲೂಕಿನ ನುಗಡೋಣಿ - ಹೂಸೂರು ಸಂಚಾರ ಕಡಿತಗೊಂಡಿದೆ.
ಭಾರಿ ಮಳೆಗೆ ರಾಯಚೂರಿನಲ್ಲಿ ಸೇತುವೆ ಕುಸಿತ!
ಜಿಲ್ಲೆಯಲ್ಲಿ ಶುಕ್ರವಾರದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಸದ್ಯ ಸೇತುವೆಯೊಂದು ಕುಸಿದಿದ್ದು, ಸಿರವಾರ ತಾಲೂಕಿನ ನುಗಡೋಣಿ - ಹೂಸೂರು ಸಂಚಾರ ಕಡಿತಗೊಂಡಿದೆ.
ಧಾರಾಕಾರ ಮಳೆಗೆ ರಾಯಚೂರಿನಲ್ಲಿ ಸೇತುವೆ ಕುಸಿತ
ಗ್ರಾಮಕ್ಕೆ ಸಂಚಾರ ಕಲ್ಪಿಸುವಂತಹ ಹಳ್ಳದ ಬ್ರಿಡ್ಜ್ ಕುಸಿದುಬಿದ್ದ ಪರಿಣಾಮ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು, ಸಂಚಾರಕ್ಕೆ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಶುಕ್ರವಾರದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.
ನುಗಡೋಣಿ-ಹೂಸೂರು ಗ್ರಾಮದ ಹಳ್ಳದಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿರುವ ಪರಿಣಾಮ ಬ್ರಿಡ್ಜ್ ಕುಸಿದು ಬಿದ್ದಿದ್ದು, ಸಂಪರ್ಕ ಕಡಿತಗೊಂಡಿದೆ. ಸದ್ಯ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿ, ಬಳಿಕ ಶಾಶ್ವತ ಸಂಚಾರ ವ್ಯವಸ್ಥೆ ಒದಗಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.