ರಾಯಚೂರು:2020 ಜನವರಿ 26ರಂದು ನಡೆಯುವಗಣರಾಜ್ಯೋತ್ಸವ ಆಚರಣೆಗೆ ಬ್ರೆಜಿಲ್ ಪ್ರಧಾನಿಯನ್ನು ವಿಶೇಷ ಅತಿಥಿಯನ್ನಾಗಿ ಆಹ್ವಾನಿಸಿರುವುದಕ್ಕೆ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ಮುಖಂಡ ಚಾಮರಸ ಮಾಲೀಪಾಟೀಲ್ ವಿರೋಧ ವ್ಯಕ್ತಪಡಿಸಿದ್ದಾರೆ.
ಗಣರಾಜ್ಯೋತ್ಸವಕ್ಕೆ ಬ್ರೆಜಿಲ್ ಪ್ರಧಾನಿಗೆ ಆಹ್ವಾನ: ಹಸಿರು ಸೇನೆ ಸಂಘಟನೆ ಮುಖಂಡ ವಿರೋಧ - Brazil Prime Minister to indian republic day opposed
ಗಣರಾಜ್ಯೋತ್ಸವ ಆಚರಣೆಗೆ ಬ್ರೆಜಿಲ್ ಪ್ರಧಾನಿಯನ್ನು ಆಹ್ವಾನಿಸಿರುವುದಕ್ಕೆ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ಮುಖಂಡ ಚಾಮರಸ ಮಾಲೀಪಾಟೀಲ್ ವಿರೋಧ ವ್ಯಕ್ತಪಡಿಸಿದ್ದಾರೆ.

ಪ್ರತಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಾಮರಸ ಮಾಲೀಪಾಟೀಲ್,ಭಾರತದಲ್ಲಿ ಕಬ್ಬು ಬೆಳೆಗಾರರಿಗೆ ಸರ್ಕಾರ ಸಬ್ಸಿಡಿ ನೀಡುತ್ತಿದೆ. ಇದರಿಂದ ವಿಶ್ವ ಮಾರುಕಟ್ಟೆಯಲ್ಲಿ ಕಬ್ಬು ದರದಲ್ಲಿ ಏರುಪೇರು ಆಗುತ್ತದೆ ಎಂದು ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ವಿರುದ್ಧ ಬ್ರೆಜಿಲ್ ದಾವೆ ಹೂಡಿದೆ. ಹೀಗಾಗಿ ಬ್ರಿಜಿಲ್ ಪ್ರಧಾನಿಯನ್ನು ನಮ್ಮ ದೇಶದ ಗಣರಾಜ್ಯೋತ್ಸವಕ್ಕೆ ಆಹ್ವಾನಿಸಬಾರದಾಗಿತ್ತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2020 ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವ ಆಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ, ಬ್ರೆಜಿಲ್ ಪ್ರಧಾನಿ ಜೈರ್ ಬೋಲ್ಸನಾರೊ ಅವರನ್ನು ಆಹ್ವಾನಿಸಿದ್ದರು.