ರಾಯಚೂರು: ಆಟವಾಡುತ್ತಿದ್ದ ಇಬ್ಬರು ಮಕ್ಕಳು ಕಾಲು ಜಾರಿ ಚರಂಡಿ ಗುಂಡಿಯಲ್ಲಿ ಬಿದ್ದು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಬ್ಯಾಗವಾಟ್ನಲ್ಲಿ ಸಂಭವಿಸಿದೆ. ಬ್ಯಾಗವಾಟ್ನಲ್ಲಿ ಚರಂಡಿ ನಿರ್ಮಾಣಕ್ಕೆ ಗುಂಡಿಯನ್ನು ತೋಡಲಾಗಿತ್ತು. ಈ ಗುಂಡಿಗೆ ಅಜಯ್(8), ಸುರೇಶ(6) ಎಂಬಿಬ್ಬರು ಬಾಲಕರು ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಇವರು ಒಂದೇ ಮನೆಯ ಅಣ್ಣ-ತಮ್ಮಂದಿರ ಮಕ್ಕಳು ಎಂದು ಹೇಳಲಾಗುತ್ತಿದೆ.
ರಾಯಚೂರು: ಚರಂಡಿ ಗುಂಡಿಗೆ ಬಿದ್ದು ಇಬ್ಬರು ಬಾಲಕರು ಸಾವು - ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿ
ಚರಂಡಿಗಾಗಿ ತೋಡಿದ್ದ ಗುಂಡಿಯ ಕಾಮಗಾರಿ ಪೂರ್ತಿಗೊಳಿಸದೇ ಇದ್ದುದರಿಂದ ಅದೇ ಗುಂಡಿಗೆ ಇಬ್ಬರು ಬಾಲಕರು ಬಿದ್ದು ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೇ?: ಗ್ರಾಮದಲ್ಲಿ ಚರಂಡಿ ಕಾಮಗಾರಿ ಮಾಡಲು ಗುಂಡಿ ತೋಡಲಾಗಿದೆ. ಗುಂಡಿ ತೋಡಿ ಎರಡ್ಮೂರು ತಿಂಗಳಾಗಿದ್ದರೂ ಚರಂಡಿ ಮುಚ್ಚುವ ಗೋಜಿಗೆ ಹೋಗಿರಲಿಲ್ಲ. ಇದರಿಂದಾಗಿ ಚರಂಡಿಯಲ್ಲಿ ನೀರು ಸಂಗ್ರಹವಾಗಿತ್ತು. ಶಾಲೆಯ ಪಕ್ಕದಲ್ಲೇ ಈ ಚರಂಡಿ ಗುಂಡಿ ಇದ್ದು ಆಟವಾಡಲು ಹೋಗಿದ್ದಾಗ ಗುಂಡಿ ಇರೋದನ್ನು ಗಮನಿಸದೇ ಕಾಲು ಜಾರಿ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನು ಓದಿ:ತಮ್ಮನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಅಣ್ಣನ ಸಾವು; ಇಬ್ಬರು ಮಕ್ಕಳ ಕಳೆದುಕೊಂಡ ಪೋಷಕರು!