ರಾಯಚೂರು:ಮನೆಯ ತಾರಸಿ ಕುಸಿದು ಬಿದ್ದು ಒಬ್ಬ ಬಾಲಕ ಸಾವನ್ನಪ್ಪಿ, ಇತರ ನಾಲ್ಕೈದು ಬಾಲಕರು ಗಾಯಗೊಂಡಿರುವ ಘಟನೆ ನಗರದ ಸಿಯಾತಲಾಬ್ ಬಡಾವಣೆಯಲ್ಲಿನ ಹಿಂದಿ ವರ್ಧಮಾನ ಶಾಲೆ ಬಳಿ ಗುರುವಾರ ಸಂಭವಿಸಿದೆ.
ವಿಕಾಸ್(6) ಎಂಬಾತನೆ ಮೃತ ಬಾಲಕನಾಗಿದ್ದಾನೆ, ಗಾಯಾಳುಗಳನ್ನು ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿದೆ. ಸ್ಲಂ ಬೋರ್ಡ್ನಿಂದ ನಿರ್ಮಿಸಲಾಗಿದೆ ಎನ್ನಲಾದ ಮನೆಯಲ್ಲಿ ವಾಸಿಸುತ್ತಿದ್ದ ಸೆಂಟ್ರಿಂಗ್ ಈರಣ್ಣ ಎಂಬಾತ ಮೃತಪಟ್ಟಿದ್ದ. ಶವಸಂಸ್ಕಾರಕ್ಕೆ ಸಂಬಂಧಿಕರು ಬಂದಿದ್ದರು. ಅಂತ್ಯಕ್ರಿಯೆಗೆ ಮನೆಯಲ್ಲಿ ಸಿದ್ಧತೆ ನಡೆಯುತ್ತಿದ್ದಾಗಲೇ ಬಾಲಕರು ಮನೆಯ ಟೆರೆಸ್ ಮೇಲೆ ನಿಂತು ನೋಡುತ್ತಿದ್ದರು.