ರಾಯಚೂರು: ಲಿಂಗಸುಗೂರು ತಾಲ್ಲೂಕಿನ ತೊಡಕಿ ಬಳಿಯ ಕೊಪ್ಪಳ-ರಾಯಚೂರು ಗಡಿ ಭಾಗದಲ್ಲಿ ಆರಂಭಿಸಿದ ಚೆಕ್ ಪೋಸ್ಟ್ ಗಾಳಿ, ಮಳೆಗೆ ನೆಲಕ್ಕಪ್ಪಳಿಸಿತು. ಈ ಘಟನೆಯ ವೇಳೆ ಕರ್ತವ್ಯದಲ್ಲಿದ್ದ ಸಿಬ್ಬಂದಿ ತಬ್ಬಿಬ್ಬಾದರು.
ಭಾರಿ ಗಾಳಿ, ಮಳೆಗೆ ಗಡಿ ಭಾಗದ ಚೆಕ್‌ಪೋಸ್ಟ್ ನೆಲಸಮ: ಸಿಬ್ಬಂದಿ ಪರದಾಟ
ಕೊರೊನಾ ವೈರಸ್ ಹರಡದಂತೆ ಗಡಿ ಪ್ರದೇಶದಲ್ಲಿ ಅನ್ಯ ಜಿಲ್ಲೆ, ರಾಜ್ಯದ ವಾಹನ ಹಾಗು ಜನರ ಪ್ರಯಾಣ ನಿಯಂತ್ರಣಕ್ಕೆ ಆರಂಭಗೊಂಡ ಚೆಕ್ ಪೋಸ್ಟ್‌ನಲ್ಲಿ ಆರೋಗ್ಯ, ಕಂದಾಯ, ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಂಗಳವಾರ ಸಂಜೆ ಏಕಾಏಕಿ ಸುರಿದ ಧಾರಾಕಾರ ಮಳೆಗೆ ಚೆಕ್ ಪೋಸ್ಟ್ ಟೆಂಟ್ ನೆಲಸಮಗೊಂಡಿದೆ.
ಭಾರಿ ಗಾಳಿ, ಮಳೆಗೆ ಗಡಿ ಭಾಗದ ಚೆಕ್ ಪೋಸ್ಟ್ ನೆಲಸಮ: ಪರದಾಡಿದ ಸಿಬ್ಬಂದಿ
ಕೊರೊನಾ ವೈರಸ್ ಹರಡದಂತೆ ಗಡಿ ಪ್ರದೇಶದಲ್ಲಿ ಅನ್ಯ ಜಿಲ್ಲೆ, ರಾಜ್ಯದ ವಾಹನ, ಜನರ ಪ್ರಯಾಣ ನಿಯಂತ್ರಣಕ್ಕೆ ಆರಂಭಗೊಂಡ ಚೆಕ್ ಪೋಸ್ಟ್‌ನಲ್ಲಿ ಆರೋಗ್ಯ, ಕಂದಾಯ, ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಂಗಳವಾರ ಸಂಜೆ ಏಕಾಏಕಿ ಸುರಿದ ಭಾರಿ ಗಾಳಿ ಮಳೆಗೆ ಚೆಕ್ ಪೋಸ್ಟ್ ಟೆಂಟ್ ನೆಲಸಮಗೊಂಡಿದ್ದರಿಂದ ಸಿಬ್ಬಂದಿ ಪರದಾಡುವಂತಾಗಿದೆ.
ಇನ್ನಾದರೂ ತಾಲ್ಲೂಕು ಆಡಳಿತ ಸುಸಜ್ಜಿತ ಟೆಂಟ್ ಜೊತೆ ಅಗತ್ಯ ಸೌಲಭ್ಯ ಕಲ್ಪಿಸುವುದೇ? ಕಾದು ನೋಡಬೇಕಿದೆ.