ರಾಯಚೂರು: ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದ ಚಿಂಚೋಡಿ ಗ್ರಾಮದ ಯುವಕ ಸಂತೋಷನ ಮೃತದೇಹ ಪತ್ತೆಯಾಗಿದೆ.
ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ಪತ್ತೆ - ಕೃಷ್ಣ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕ
ಎರಡು ದಿನದ ಹಿಂದೆ ಕೃಷ್ಣ ನದಿ ಪ್ರವಾಹಕ್ಕೆ ಸಿಲುಕಿ ಸಂತೋಷ್ ಎಂಬಾತ ಕೊಚ್ಚಿ ಹೋಗಿದ್ದು, ಇಂದು ಆತನ ಮೃತದೇಹ ಮುದುಗೋಟ ಗ್ರಾಮದ ಬಳಿ ಪತ್ತೆಯಾಗಿದೆ.
ಕೃಷ್ಣ ನದಿ ತೀರದಲ್ಲಿ ಪತ್ತೆಯಾದ ಮೃತದೇಹ
ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಮುದುಗೋಟದ ಕೃಷ್ಣ ನದಿ ತೀರದಲ್ಲಿ ಮೃತದೇಹ ಪತ್ತೆಯಾಗಿದೆ. ಚಿಂಚೋಡಿ ಗ್ರಾಮದ ನದಿ ತೀರದಲ್ಲಿ ದನ ಕಾಯಲು ಸಂತೋಷ ಸೇರಿದಂತೆ ನಾಲ್ವರ ಎರಡು ದಿನದ ಹಿಂದೆ ತೆರಳಿದ್ರು. ನದಿಗೆ ನೀರು ಹರಿದು ಬಂದ ಹಿನ್ನೆಲೆ ಪ್ರವಾಹಕ್ಕೆ ಸಂತೋಷ್ ಕೊಚ್ಚಿ ಹೋಗಿದ್ದ.
ಮೃತದೇಹಕ್ಕಾಗಿ ಅಗ್ನಿಶಾಮಕದಳದ ಸಿಬ್ಬಂದಿ ಬೋಟ್ ಸಹಾಯದಿಂದ ಶೋಧ ಕಾರ್ಯ ನಡೆಸಿದ್ದರೂ ಶವ ಪತ್ತೆಯಾಗಿರಲಿಲ್ಲ. ನಿನ್ನೆ ರಾತ್ರಿ ವೇಳೆ ಮುದುಗೋಟ ಗ್ರಾಮದ ಬಳಿ ಹೆಣ ಪತ್ತೆಯಾಗಿದ್ದು, ಇಂದು ಯುವಕನ ದೇಹವನ್ನು ನದಿಯಿಂದ ಹೊರ ತೆಗೆಯಲಾಗಿದೆ.