ಕರ್ನಾಟಕ

karnataka

ETV Bharat / state

ಮಸ್ಕಿಯಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು : ಬಿ ವೈ ವಿಜಯೇಂದ್ರ ವಿಶ್ವಾಸ

ನಾವು ಹಳ್ಳಿ ಹಳ್ಳಿಗೆ, ಗ್ರಾಮ ಪಂಚಾಯತ್‌ಗಳಿಗೆ ಹೋಗಿ ಪ್ರಚಾರ ಮಾಡುತ್ತಿದ್ದೇವೆ. 5ಎ ಕಾಲುವೆ ಸಮಸ್ಯೆ ಬಗೆಹರಿಸಬೇಕು ಅಂದ್ರೆ ಬಿಜೆಪಿ, ಸಿಎಂ ಯಡಿಯೂರಪ್ಪ ಅವರಿಂದ ಮಾತ್ರ ಸಾಧ್ಯ. ಈ ಬಗ್ಗೆ ಸಿಎಂ ಸಮಾಲೋಚನೆ ಮಾಡುತ್ತಿದ್ದಾರೆ. ಮುಂದೆ ಪರಿಹಾರ ಸಿಗುತ್ತದೆ..

BJP state vice president BY Vijayendra
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ

By

Published : Apr 5, 2021, 2:40 PM IST

ರಾಯಚೂರು :ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವುಕುಮಾರ್​ ಮಾತ್ರ ಅಲ್ಲ ಯಾವ ದಿಗ್ಗಜರು ಬಂದು ಪ್ರಚಾರ ಮಾಡಿದರೂ ಬಿಜೆಪಿ ಗೆಲುವು ತಡೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.

ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿಯೇ ಗೆಲ್ತಾರೆ.. ಬಿ ವೈ ವಿಜಯೇಂದ್ರ ವಿಶ್ವಾಸ

ಮಸ್ಕಿ ತಾಲೂಕಿನ ಕೋಳಬಾಳ ಗ್ರಾಮದಲ್ಲಿ ಬಿಜೆಪಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಸ್ಕಿಯಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು ಸಿಗಲಿದೆ. ಕಾಂಗ್ರೆಸ್ ಪಕ್ಷದವರನ್ನ ನೋಡಿದರೆ ಅಯ್ಯೋ ಪಾಪ ಅನಿಸುತ್ತದೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಹಣ ಹಂಚಿಕೆ ಮಾಡುತ್ತದೆ ಅನ್ನೋ ಕಾಂಗ್ರೆಸ್ಸಿಗರ ಆರೋಪಕ್ಕೆ ತಿರುಗೇಟು ನೀಡಿದ ವಿಜಯೇಂದ್ರ, ಕೆಆರ್‌ಪೇಟೆ, ಶಿರಾ ಸೋಲಿನ ಆಘಾತದಿಂದ ಕಾಂಗ್ರೆಸ್ ಹೊರ ಬಂದಿಲ್ಲ. ಅಲ್ಲಿನ ಮತದಾರರಿಗೆ ಅವಮಾನ ಮಾಡುತ್ತಿದ್ದಾರೆ. ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿ ಗೆಲ್ಲಲಿ. ಸುಮ್ಮನೆ ಆರೋಪ ಮಾಡುವುದಲ್ಲ. ಮತದಾರರನ್ನ ಕಾಂಗ್ರೆಸ್​ನವರು ಮೂರ್ಖರು ಅಂದುಕೊಂಡಿದ್ದಾರೆ.

ಶಿರಾ ಮದಲೂರು ಕೆರೆಗೆ ನೀರು ಹರಿಸಿರಲಿಲ್ಲ. ಸಿಎಂ ಬಿಎಸ್​ವೈ ಮಾತು ಕೊಟ್ಟಂತೆ ನೀರು ಹರಿಸಿದ್ದಾರೆ. ನಾವು ಹಳ್ಳಿ ಹಳ್ಳಿಗೆ, ಗ್ರಾಮ ಪಂಚಾಯತ್‌ಗಳಿಗೆ ಹೋಗಿ ಪ್ರಚಾರ ಮಾಡುತ್ತಿದ್ದೇವೆ. 5ಎ ಕಾಲುವೆ ಸಮಸ್ಯೆ ಬಗೆಹರಿಸಬೇಕು ಅಂದ್ರೆ ಬಿಜೆಪಿ, ಸಿಎಂ ಯಡಿಯೂರಪ್ಪ ಅವರಿಂದ ಮಾತ್ರ ಸಾಧ್ಯ. ಈ ಬಗ್ಗೆ ಸಿಎಂ ಸಮಾಲೋಚನೆ ಮಾಡುತ್ತಿದ್ದಾರೆ. ಮುಂದೆ ಪರಿಹಾರ ಸಿಗುತ್ತದೆ ಎಂದರು.

ಬಿಎಸ್​ವೈ ಮಠಗಳಿಗೆ ಹೆಚ್ಚು ಆದ್ಯತೆ ಕೊಡುತ್ತಿದೆ ಅನ್ನೋ ಕಾಂಗ್ರೆಸ್​ಗೆ ನಾಚಿಕೆಯಾಗಬೇಕು. ಬಿಎಸ್​​ವೈ ಎಲ್ಲಾ ಸಮಾಜಕ್ಕೆ ಸೇರಿದವರು. ಯಾವುದೇ ಜಾತಿಗೆ ಸೀಮಿತವಾಗಿಲ್ಲ. ಜಾತಿ ಆಧಾರದಲ್ಲಿ ಗೆಲ್ಲುವ ಬಗ್ಗೆ ಮಾತನಾಡುವ ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು ಎಂದು ವಿಜಯೇಂದ್ರ ಕಿಡಿಕಾರಿದ್ರು.

ಮದ್ಯ ಮಾರಾಟ ನಿಷೇಧಿಸಲು ಒತ್ತಾಯ :ಮಸ್ಕಿ ತಾಲೂಕಿನ ಕೋಳಬಾಳ ಗ್ರಾಮದಲ್ಲಿ ಪ್ರಚಾರ ನಡೆಸುವ ವೇಳೆ ಮದ್ಯ ಮಾರಾಟ ನಿಷೇಧಿಸುವಂತೆ ಮಹಿಳೆಯರು ಒತ್ತಾಯಿಸಿದರು. ಮದ್ಯ ಮಾರಾಟದಿಂದಾಗಿ ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ. ಬಡವರ ಮನೆಗಳು ಹಾಳಾಗಿ ಹೋಗುತ್ತಿವೆ ಎಂದು ಮಹಿಳೆಯರು ಅಳಲು ತೋಡಿಕೊಂಡರು.

ಓದಿ:ಮಸ್ಕಿ ಉಪಚುನಾವಣೆಯಲ್ಲಿ ಪ್ರತಾಪ್​​​​ಗೌಡ ಪಾಟೀಲ್​ಗೆ ಗೆಲುವು ನಿಶ್ಚಿತ : ಬಿ.ವೈ. ವಿಜಯೇಂದ್ರ

ABOUT THE AUTHOR

...view details