ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲದೊಂದಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಸಿರವಾರ ತಾ.ಪಂ ಚುನಾವಣೆಯಲ್ಲಿ 'ಕಮಲ' ಹೊತ್ತ 'ತೆನೆ' - ಸಿರವಾರ ತಾ.ಪಂ ಚುನಾವಣೆಯಲ್ಲಿ
ರಾಯಚೂರು ಜಿಲ್ಲೆಯ ಸಿರವಾರದ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿಯಿಂದಾಗಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ದೇವರಾಜ ನಾಯಕ ಅಧ್ಯಕ್ಷರಾಗಿ, ಯಲ್ಲಮ್ಮ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಒಟ್ಟು 10 ಸದಸ್ಯ ಬಲ ಹೊಂದಿದ್ದ ತಾ.ಪಂ.ಯಲ್ಲಿ ಬಿಜೆಪಿ-05, ಕಾಂಗ್ರೆಸ್-04, ಜೆಡಿಎಸ್-01 ಸ್ಥಾನ ಗೆದ್ದುಕೊಂಡಿದೆ. ಅಧಿಕಾರ ಚುಕ್ಕಾಣಿ ಹಿಡಿಯಲು 6 ಸದಸ್ಯ ಬೆಂಬಲ ಅವಶ್ಯವಿದ್ದು, ಯಾವುದೇ ಪಕ್ಷಕ್ಕೆ ಸ್ಪಷ್ಟ ಬೆಂಬಲವಿಲ್ಲದ ಕಾರಣ ಬಿಜೆಪಿ ಅಧಿಕಾರವನ್ನ ಹಿಡಿಯುವುದಕ್ಕೆ ಓರ್ವ ಸದಸ್ಯರ ಬೆಂಬಲ ಅಗತ್ಯವಿತ್ತು.
ಓರ್ವ ಜೆಡಿಎಸ್ ಸದಸ್ಯನ ಬೆಂಬಲದೊಂದಿಗೆ ಸುಲಭವಾಗಿ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ವರ್ಷದ ಹಿಂದೆ ಆಡಳಿತ ನಡೆಸಿದ್ದು, ಸಿರವಾರ ತಾ.ಪಂ. ಚುನಾವಣೆಯಲ್ಲಿ, ಕಮಲಕ್ಕೆ ತೆನೆ ಸಾಥ್ ನೀಡುವ ಮೂಲಕ ಅಧಿಕಾರ ಹಿಡಿದಿದೆ.