ರಾಯಚೂರು:ರಾಜ್ಯ ಬಿಜೆಪಿಸರ್ಕಾರ ದಿವಾಳಿ ಅಂಚಿನಲ್ಲಿದ್ದು, ಕೇಂದ್ರದಿಂದ ಅನುದಾನ ಬಿಡುಗಡೆಯಾಗುತ್ತಿಲ್ಲವೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಗುಡುಗಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ಅನುದಾನ ಬರಬೇಕು. ಆದ್ರೆ ಅದು ಬಿಡುಗಡೆಯಾಗುತ್ತಿಲ್ಲ. ಇದರಿಂದ ಸರ್ಕಾರ ದಿವಾಳಿ ಅಂಚಿನಲ್ಲಿದೆ. ದೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಳಾಗುತ್ತಿದೆ. ಅಸಂವಿಧಾನತ್ಮಕ ಕಾಯಿದೆಯಿಂದ ದೇಶದಲ್ಲಿ ಕೋಮು ಸಾಮರಸ್ಯ ಉಂಟಾಗುತ್ತಿದೆ ಎಂದರು.