ರಾಯಚೂರು:ದೇಶದ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಿಗೆ ಬಿಜೆಪಿ ಸರಕಾರ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳವನ್ನ ನೀಡುತ್ತಿದೆ ಎಂದು ಮಾಜಿ ಸಂಸದ ಬಿ.ವಿ. ನಾಯಕ ಆರೋಪಿಸಿದ್ದಾರೆ.
ಬಿಜೆಪಿ ಸರ್ಕಾರ ಪ್ರತಿಪಕ್ಷದ ನಾಯಕರನ್ನ ಟಾರ್ಗೆಟ್ ಮಾಡ್ತಿದೆ: ಬಿ.ವಿ. ನಾಯಕ - BV Nayaka
ದೇಶಾದ್ಯಂತ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಿಗೆ ಕೇಂದ್ರ ಸರ್ಕಾರ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳವನ್ನ ನೀಡುತ್ತಿದೆ ಎಂದು ಮಾಜಿ ಸಂಸದ ಬಿ.ವಿ. ನಾಯಕ ಆರೋಪಿಸಿದ್ದಾರೆ.
![ಬಿಜೆಪಿ ಸರ್ಕಾರ ಪ್ರತಿಪಕ್ಷದ ನಾಯಕರನ್ನ ಟಾರ್ಗೆಟ್ ಮಾಡ್ತಿದೆ: ಬಿ.ವಿ. ನಾಯಕ](https://etvbharatimages.akamaized.net/etvbharat/prod-images/768-512-4336303-thumbnail-3x2-net.jpg)
ಈಟಿವಿ ಭಾರತ್‌ನೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ಪ್ರತಿಪಕ್ಷದ ನಾಯಕರನ್ನ ಟಾರ್ಗೆಟ್ ಮಾಡಿಕೊಂಡು ಅವರಿಗೆ ಕಿರುಕುಳ ನೀಡುತ್ತಿವೆ. ಇದರಿಂದ ಪ್ರಜಾಪ್ರಭುತ್ವ ಮೌಲ್ಯಗಳು ಅಳಿಯುತ್ತಿವೆಯಾ ಎಂಬ ಅನುಮಾನ ವ್ಯಕ್ತವಾಗ್ತಿದೆ. ಮಾಜಿ ಸಚಿವ ಡಿಕೆಶಿ ಅವರಿಗೆ ಬಿಜೆಪಿ ರಾಜಕೀಯವಾಗಿ ತೊಂದರೆ ನೀಡುತ್ತಿದೆ ಎಂದು ದೂರಿದರು.
ರಾಜ್ಯದಲ್ಲಿ ಮುಂಬರಲಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ನಾಯಕರನ್ನು ಮಾನಸಿಕವಾಗಿ ಕುಗ್ಗಿಸುವ ಮೂಲಕ, ಜಯಗಳಿಸಲು ಪ್ರಯತ್ನ ನಡೆಸಿದ್ದಾರೆ. ಅಲ್ಲದೇ ಬಿಜೆಪಿ ಮೊದಲಿನಿಂದಲೂ ಮಾಜಿ ಸಚಿವರಾದ ಡಿಕೆಶಿ, ಪಿ. ಚಿದಂಬರಂ ಸೇರಿದಂತೆ ಹಲವು ಪ್ರಮುಖ ನಾಯಕರಿಗೆ ತೊಂದರೆ ನೀಡುವ ಮೂಲಕ ಸರ್ವಾಧಿಕಾರಿ ಆಡಳಿತ ನಡೆಸುತ್ತಿದೆ ಎಂದು ಮಾಜಿ ಸಂಸದ ಬಿ ವಿ ನಾಯಕ್ ಕಿಡಿಕಾರಿದರು.