ರಾಯಚೂರು: ಬೈಕ್ ಕಳ್ಳನೊಬ್ಬನನ್ನು ಸಿಂಧನೂರು ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಮಸ್ಕಿ ಪಟ್ಟಣದ ಸೋಮನಾಥ ನಗರ ಬಡಾವಣೆ ನಿವಾಸಿ ಉಮೇಶ ಜಾಲಿಹಾಳ್ ಬಂಧಿತ ಆರೋಪಿ. ಈತನಿಂದ 1.20 ಲಕ್ಷ ರೂ. ಬೆಲೆ ಬಾಳುವ 3 ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಿಂಧನೂರಿನಲ್ಲಿ ಖತರ್ನಾಕ್ ಬೈಕ್ ಚೋರನ ಬಂಧನ.. - ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ
ಬೈಕ್ ಕಳ್ಳನೊಬ್ಬನನ್ನು ಸಿಂಧನೂರು ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.
![ಸಿಂಧನೂರಿನಲ್ಲಿ ಖತರ್ನಾಕ್ ಬೈಕ್ ಚೋರನ ಬಂಧನ.. Bike thief arrested in Sindhanur](https://etvbharatimages.akamaized.net/etvbharat/prod-images/768-512-5577490-thumbnail-3x2-smk.jpg)
ಸಿಂಧನೂರಿನಲ್ಲಿ ಖತರ್ನಾಕ್ ಬೈಕ್ ಕಳ್ಳನ ಬಂಧನ
ಸಿಂಧನೂರು ತಾಲೂಕಿನ ಬಾದರ್ಲಿ ಗ್ರಾಮದ ಶರಣಪ್ಪ ಎಂಬುವರ ಬೈಕ್ ಕಳ್ಳತನವಾಗಿತ್ತು. ಈ ಕುರಿತು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಉಮೇಶನನ್ನು ಹಿಡಿದು ವಿಚಾರಿಸಿದಾಗ, ಒಟ್ಟು ಮೂರು ಬೈಕ್ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಕೊಪ್ಪಳದ ಹುಲಿಗಿ ಗ್ರಾಮದಲ್ಲಿ ಒಂದು ಬೈಕ್ ಹಾಗೂ ಸಿಂಧನೂರು ನಗರದ ಬಸ್ ನಿಲ್ದಾಣ ಹತ್ತಿರ ಎರಡು ಬೈಕ್‌ಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿ ಹಾಗೂ ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.