ರಾಯಚೂರು: ಬೈಕ್ ಕಳ್ಳತನ ಮಾಡುತ್ತಿದ್ದ ಶಿವರಾಜ ಪಲಕಮರಡಿ ಎಂಬಾತನನ್ನು ಬಂಧಿಸುವಲ್ಲಿ ಜಿಲ್ಲೆಯ ಮಾನ್ವಿ ಪೊಲೀಸರು ಯಶ್ವಸಿಯಾಗಿದ್ದಾರೆ.
ಬಿಸಿಲ ನಗರಿಯಲ್ಲಿ ಖತರ್ನಾಕ್ ಬೈಕ್ ಕಳ್ಳನ ಬಂಧನ - ರಾಯಚೂರು
ರಾಯಚೂರು ಜಿಲ್ಲೆಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಶಿವರಾಜ ಪಲಕಮರಡಿ ಎಂಬಾತನನ್ನು ಬಂಧಿಸುವಲ್ಲಿ ಮಾನ್ವಿ ಪೊಲೀಸರು ಯಶ್ವಸಿಯಾಗಿದ್ದಾರೆ.
ರಾಯಚೂರು
ಆರೋಪಿ ಸಿರವಾರ ತಾಲೂಕಿನ ಹುಡಾ ಗ್ರಾಮದವನಾಗಿದ್ದು,ಈತನಿಂದ 3 ಲಕ್ಷದ 60 ಸಾವಿರ ಬೆಲೆಬಾಳುವ ವಿವಿಧ ಕಂಪನಿಗಳ 9 ಬೈಕ್ಗಳನ್ನ ವಶಪಡಿಸಿಕೊಳ್ಳಲಾಗಿದೆ. ಇತ್ತೀಚೆಗೆ ಮಾನ್ವಿ ತಾಲೂಕಿನಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದವು..
ಈ ಕುರಿತಂತೆ ತಾಲೂಕಿನ ನಾನಾ ಠಾಣೆಗಳಲ್ಲಿ ಬೈಕ್ ಮಾಲೀಕರು ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಪ್ರವೃತ್ತರಾಗಿದ್ದ ಪೊಲೀಸರು ಆರೋಪಿಯ ಹೆಡೆಮುರಿ ಕಟ್ಟಿ ಕಂಬಿ ಹಿಂದೆ ತಳ್ಳಿದ್ದಾರೆ.