ಕರ್ನಾಟಕ

karnataka

ETV Bharat / state

ಸಿರಿವಾರ: ಬೈಕ್ ಖದೀಮನ ಸೆರೆ - ಬೈಕ್​ ಕಳ್ಳ ಸೆರೆ

ಬೈಕ್​ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಸಿರವಾರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Bike theft arrest
Bike theft arrest

By

Published : Jun 29, 2020, 8:31 PM IST

ರಾಯಚೂರು:ನಕಲಿ ಕೀಲಿಗಳ ಸಹಾಯದಿಂದ ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮನನ್ನು ಸೆರೆ ಹಿಡಿಯುವಲ್ಲಿ ಸಿರವಾರ ಠಾಣೆ ಪೊಲೀಸರು ಯಶ್ವಸಿಯಾಗಿದ್ದಾರೆ.

ಜಿಲ್ಲೆಯ ಸಿರವಾರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ 8 ಬೈಕ್​ಗಳನ್ನು ವಶಕ್ಕೆ ಪಡೆದಿದ್ದಾರೆ. ದೇವದುರ್ಗ ತಾಲೂಕಿನ ತುಮ್ಮನಮರಡಿ ಗ್ರಾಮದ ಜೆಸಿಬಿ ಅಪರೇಟರ್ ಕೆಲಸ ಮಾಡುತ್ತಿದ್ದ ಬೂದೆಪ್ಪ ಬಂಧಿತ ಆರೋಪಿ. ಬಂಧಿತನಿಂದ ಒಟ್ಟು 2,80,000 ರೂಪಾಯಿ ಮೌಲ್ಯದ 8 ಬೈಕ್​ಗಳನ್ನು ವಶಕ್ಕೆ ಪಡೆದುಕೊಂಡಿದ್ದರೆ.

ಸಿರವಾರ ಪಟ್ಟಣದಲ್ಲಿ ಕಳೆದ ಎರಡು ದಿನಗಳಿಂದ ಮಲ್ಲಯ್ಯ ಎನ್ನುವವರು ಕಂದಕೂರು ಆಸ್ಪತ್ರೆಯಲ್ಲಿ ಬಳಿ ನಿಲ್ಲಿಸಿದ ಬೈಕ್ ಕಳ್ಳತನವಾಗಿತ್ತು. ಈ ಬಗ್ಗೆ ಮಲ್ಲಯ್ಯ ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ದೂರಿನ ಪ್ರಕರಣವನ್ನ ಕೈಗೆತ್ತಿಕೊಂಡು ಪೊಲೀಸರು ಇಂದು ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದಲ್ಲಿ ಬೈಕ್ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಬೈಕ್ ಕಳ್ಳತನ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details