ಕರ್ನಾಟಕ

karnataka

ETV Bharat / state

ಹೆಲ್ಮೆಟ್​ ಧರಿಸಲು ಬಿಸಿಲೂರಿನ ಜನತೆ ನಿರಾಸಕ್ತಿ: ₹35 ಲಕ್ಷ ದಂಡ ಸಂಗ್ರಹ

ಬಿಸಿಲೂರಿನ ಜನತೆ ಹೆಲ್ಮೆಟ್​ ಧರಿಸಲು ನಿರಾಸಕ್ತಿ ತೋರುತ್ತಿದ್ದು, ಈ ವರ್ಷ (ಅ.31ರವರೆಗೆ) 7,042 ಬೈಕ್​ ಸವಾರರ ವಿರುದ್ಧ ಪ್ರಕರಣ ದಾಖಲಾಗಿದೆ. ₹35,60,200 ದಂಡ ಸಂಗ್ರಹವಾಗಿದೆ.

Penalties for bike riders who do not wear a helmet
ಹೆಲ್ಮೆಟ್​ ಧರಿಸಲು ಬಿಸಿಲೂರಿನ ಜನತೆ ನಿರಾಸಕ್ತಿ

By

Published : Nov 24, 2020, 1:41 PM IST

ರಾಯಚೂರು:ಸುರಕ್ಷತೆ ದೃಷ್ಟಿಯಿಂದ ಹೆಲ್ಮೆಟ್ ಧರಿಸುವುದು ಕಡ್ಡಾಯ.ಆದರೆ,ಜಿಲ್ಲೆಯಲ್ಲಿ ಹೆಲ್ಮೆಟ್ ಧರಿಸುವ ಬೈಕ್ ಸವಾರರ ಸಂಖ್ಯೆ ವಿರಳವಾಗಿದೆ. ಸಂಚಾರಿ ಪೊಲೀಸರು ಹೆಲ್ಮೆಟ್ ಧರಿಸುವಂತೆ ಜಾಗೃತಿ ಮೂಡಿಸುತ್ತಿದ್ದರು ಮತ್ತು ದಂಡ ವಿಧಿಸುತ್ತಿದ್ದರೂ ಸವಾರರು ಇನ್ನೂ ಎಚ್ಚೆತ್ತುಕೊಂಡಿಲ್ಲ! ಹೆಲ್ಮೆಟ್​ ಧರಿಸದ ಪರಿಣಾಮ ಅಪಘಾತದಲ್ಲಿ ಎಷ್ಟೋ ಮಂದಿ ಪ್ರಾಣ ಕಳೆದು ಕೊಂಡಿದ್ದಾರೆ.

ರಾಯಚೂರು ನಗರದಲ್ಲಿ ಹೆಲ್ಮೆಟ್​ ಧರಿಸದೇ ಸಂಚರಿಸುತ್ತಿರುವ ಸವಾರರು ಕಂಡು ಬಂದದ್ದು ಹೀಗೆ...

ಐಎಂವಿ ಕಾಯ್ದೆಯಡಿ 2019ರಲ್ಲಿ 9,027 ಬೈಕ್ ಸವಾರರ ವಿರುದ್ಧ ಪ್ರಕರಣ ದಾಖಲಾಗಿದ್ದು, ₹18,25,600 ದಂಡ, 2020ರಲ್ಲಿ (ಅ.31ರವರೆಗೆ) 7,042 ಪ್ರಕರಣ ದಾಖಲಾಗಿದ್ದು, ₹35,60,200 ದಂಡ ಸಂಗ್ರಹವಾಗಿದೆ. ಆದರೂ ಹೆಲ್ಮೆಟ್ ಧರಿಸುವುದಕ್ಕೆ ಬೈಕ್ ಸವಾರರು ಹೆಚ್ಚು ಆಸಕ್ತಿ ತೋರುತ್ತಿಲ್ಲ. ಇನ್ನಾದರೂ ಸವಾರರು ಜಾಗೃತರಾಗಬೇಕಿದೆ.

ABOUT THE AUTHOR

...view details