ಕರ್ನಾಟಕ

karnataka

ETV Bharat / state

ಬೈಕ್​ಗಳ ನಡುವೆ ಡಿಕ್ಕಿ: ಓರ್ವ ಸಾವು, ಮತ್ತೊಬ್ಬನಿಗೆ ಗಂಭೀರ ಗಾಯ - ಬೈಕ್ ಡಿಕ್ಕಿ

ಎರಡು ಬೈಕ್​ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಬೈಕ್​ ಸವಾರ ಮೃತಪಟ್ಟಿರುವ ಘಟನೆ ಸಿಂಧನೂರು ತಾಲೂಕಿನ ಗೋನಾಳ-ರಂಗಾಪುರ ರಸ್ತೆಯಲ್ಲಿ ನಡೆದಿದೆ.

Bike accident
ಬೈಕ್​ ಅಪಘಾತ

By

Published : Mar 9, 2020, 10:02 AM IST

ರಾಯಚೂರು: ಎರಡು ಬೈಕ್​ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಬೈಕ್ ಸವಾರ ಮೃತಪಟ್ಟಿದ್ದು, ಮತ್ತೋರ್ವ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಸಿಂಧನೂರು ತಾಲೂಕಿನ ಗೋನಾಳ-ರಂಗಾಪುರ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೇರನಾಳ ಗ್ರಾಮದ ಬಾವಸಾಬ್(45) ಮೃತ ಬೈಕ್ ಸವಾರನಾಗಿದ್ದು, ಗೋನಾಳ ಗ್ರಾಮದ ಯುವಕ ಶಾರುಖಾನ್ ಎಂಬಾತ​ ಗಂಭೀರ ಗಾಯಗೊಂಡಿದ್ದಾನೆ.

ಬಾವಸಾಬ್ ಬೈಕ್ ತೆಗೆದುಕೊಂಡು ರಂಗಪುರ ಗ್ರಾಮದಿಂದ ಮೇರನಾಳ ಗ್ರಾಮ ಕಡೆ ತೆರಳುತ್ತಿದ್ದ. ಇದೇ ವೇಳೆ ಗೋನಾಳ ಗ್ರಾಮದಿಂದ ರಂಗಾಪುರ ಕಡೆಯಿಂದ ಬೈಕ್​ನಲ್ಲಿ ಬರುತ್ತಿದ್ದ ಶಾರುಖಾನ್​ ಬೈಕ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಇಬ್ಬರು ಬೈಕ್ ಸವಾರರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರವಾಗಿ ಗಾಯಗೊಂಡ ಬಾವಸಾಬ್​ನನ್ನು ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆಗೆ ಕೊಂಡೊಯ್ದರೂ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದಾನೆ. ಈ ಬಗ್ಗೆ ಬಳಗಾನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details