ರಾಯಚೂರು:ಬೈಕ್ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಇಬ್ಬರು ಸವಾರರು ಗಂಭೀರ ಗಾಯಗೊಂಡ ಘಟನೆ ನಗರದಲ್ಲಿ ನಡೆದಿದೆ.
ನಿಯಂತ್ರಣ ತಪ್ಪಿ ಬಿದ್ದ ಬೈಕ್: ಇಬ್ಬರು ಸವಾರರು ಗಂಭೀರ - Bike accident in Manthralaya Road Raichuru
ಬೈಕ್ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಇಬ್ಬರು ಸವಾರರು ಗಂಭೀರ ಗಾಯಗೊಂಡ ಘಟನೆ ರಾಯಚೂರು ನಗರದ ಮಂತ್ರಾಲಯ ರಸ್ತೆಯ ಆರ್ಟಿಒ ಕಚೇರಿ ಬಳಿ ನಡೆದಿದೆ.
![ನಿಯಂತ್ರಣ ತಪ್ಪಿ ಬಿದ್ದ ಬೈಕ್: ಇಬ್ಬರು ಸವಾರರು ಗಂಭೀರ Bike accident in raichuru](https://etvbharatimages.akamaized.net/etvbharat/prod-images/768-512-5385478-thumbnail-3x2-hrs.jpeg)
ನಗರದ ಮಂತ್ರಾಲಯ ರಸ್ತೆಯ ಆರ್ಟಿಒ ವೃತ್ತದ ಬಳಿ ಈ ದುರ್ಘಟನೆ ನಡೆದಿದೆ. ಶ್ರೀನಿಧಿ ಮತ್ತು ಶ್ರೀನಿವಾಸ್ ಗಾಯಗೊಂಡ ಬೈಕ್ ಸವಾರರೆಂದು ಗುರುತಿಸಲಾಗಿದೆ. ಅಪಘಾತ ಸಂಭವಿಸಿದ ತಕ್ಷಣ ಗಾಯಗಳುಗಳನ್ನು ಹತ್ತಿರದ ನವೋದಯ ಆಸ್ಪತ್ರೆಗೆ ರವಾನಿಸಲಾಯಿತು. ಬಳಿಕ ಅಲ್ಲಿಂದ ರಿಮ್ಸ್ ಆಸ್ಪತ್ರೆಗೆ ಸಾಗಿಸಲಾಯಿತು. ಗಂಭೀರ ಗಾಯಗೊಂಡಿರುವುದರಿಂದ ನಂತರ ಇಬ್ಬರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶ್ರೀನಿಧಿ ಮತ್ತು ಶ್ರೀನಿವಾಸ್ ಕೆಟಿಎಂ ಬೈಕ್ನಲ್ಲಿ ತೆರಳುತ್ತಿದ್ದ ಈ ವೇಳೆ ಆರ್ಟಿಒ ಸರ್ಕಲ್ ಬಳಿ ಬೈಕ್ ನಿಯಂತ್ರಣ ತಪ್ಪಿ ಬಿದ್ದಿದೆ. ರಾಯಚೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.