ರಾಯಚೂರು: ಕಾಲೇಜಿಗೆ ಮಗಳು ಮತ್ತು ಅವಳ ಸ್ನೇಹಿತೆಯನ್ನು ಬಿಡಲು ತೆರಳಿದ ವೇಳೆ ಮಾರ್ಗ ಮಧ್ಯೆ ಸಂಭವಿಸಿದ ಅಪಘಾತಲ್ಲಿ ಒಬ್ಬರು ಮೃತ ಪಟ್ಟಿದ್ದು ,3 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ನಗರದ ಐಬಿ ರಸ್ತೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬಳಿ ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಕಾಲೇಜಿಗೆ ಮಕ್ಕಳನ್ನು ಬಿಡಲು ತೆರಳಿದ್ದ ಎಸ್.ನಿರ್ಲಾಪ್ಪ(58) ಮೃತರಾಗಿದ್ದಾರೆ. ಬೈಕ್ನಲ್ಲಿದ್ದ ವೀಣಾ ಮತ್ತು ಆಕೆಯ ಸ್ನೇಹಿತೆ ವಾಣಿಶ್ರೀ ಗಾಯಗೊಂದಡಿದ್ದಾರೆ. ಎದುರಿನಿಂದ ಬೈಕ್ನಲ್ಲಿದ್ದ ಹಿಂಬದಿ ಸವಾರ ಮುರಾರಿ ಎಂಬುವವರಿಗೆ ಗಂಭೀರ ಗಾಯಗಳಾಗಿವೆ.