ರಾಯಚೂರು:ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ಗೆ ಹೈಕೋರ್ಟ್ ಸದ್ಯ ರಿಲೀಫ್ ನೀಡಿದೆ. ಯಾಕಂದ್ರೆ 2018ರ ವಿಧಾನಸಭಾ ಚುನಾವಣೆಯಲ್ಲಿ ಮಸ್ಕಿ ಕ್ಷೇತ್ರದಲ್ಲಿ ಬೋಗಸ್ ಮತದಾನ ಮಾಡಿದ್ದಾರೆಂದು ಆರೋಪಿಸಿ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ವಿರುದ್ಧ ಬಸನಗೌಡ ತುರ್ವಿಹಾಳ ದೂರು ದಾಖಲಿಸಿದ್ದರು. ಹೀಗಾಗಿ ಮಸ್ಕಿ ಕ್ಷೆತ್ರದಲ್ಲಿ ಉಪ ಚುನಾವಣೆಗೆ ನ್ಯಾಯಾಲಯ ತಡೆ ನೀಡಿತ್ತು.
ಪ್ರತಾಪಗೌಡ ಪಾಟೀಲ್ಗೆ ಬಿಗ್ ರಿಲೀಫ್: ಉಪ ಚುನಾವಣೆಗೆ ಮಸ್ಕಿ ಕ್ಷೇತ್ರ ರೆಡಿ
ಮಸ್ಕಿಯ ಅನರ್ಹ ಶಾಸಕ ಪ್ರತಾಪಗೌಡರ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ಬಸನಗೌಡ ತುರ್ವಿಹಾಳ ಹಿಂಪಡೆದಿದ್ದಾರೆ. ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ವಿರುದ್ಧ ಆರೋಪ ಇರುವ ಕಾರಣ ಕಳೆದ ವಾರ ಉಪ ಚುನಾವಣೆ ನಡೆದಿರಲಿಲ್ಲ. ಸದ್ಯ ರಾಜ್ಯ ಬಿಜೆಪಿ ಹೈಕಮಾಂಡ್ ಸೂಚನೆಯ ಹಿನ್ನೆಲೆಯಲ್ಲಿ ಪ್ರಕರಣ ಹಿಂಪಡೆದಿದ್ದಾರೆ ಎನ್ನಲಾಗಿದೆ. ಹೀಗಾಗಿ ಮತ್ತೆ ಮಸ್ಕಿ ಉಪ ಚುನಾವಣೆಗೆ ರೆಡಿಯಾಗಿದೆ.

ಬಸವನಗೌಡ ತುರುವಿಹಾಳ ಕಾಂಗ್ರೆಸ್ ಅಭ್ಯರ್ಥಿ ಪ್ರತಾಪ್‌ಗೌಡ ಪಾಟೀಲ್ ವಿರುದ್ಧ 213 ಮತಗಳ ಅಂತರದಿಂದ ಪರಾಜಿತಗೊಂಡಿದ್ದರು. ಕೆಲ ದಿನಗಳ ನಂತರ ಪ್ರತಾಪ್‌ಗೌಡ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗ ಪಕ್ಷ ವಿರೋಧಿ ಚಟುವಟಿಕೆ ಎಂದು ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದರು. ಬಳಿಕ ಅನರ್ಹತೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಸುಪ್ರೀಂ, ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡಿತ್ತು. ಆದ್ರೆ ಬೋಗಸ್ ಮತದಾನ ನಡೆದಿರುವ ಆರೋಪ ಕುರಿತು ಹೈಕೋರ್ಟ್ ದಾವೆ ಹಿನ್ನೆಲೆಯಿಂದಾಗಿ ಉಪ ಚುನಾವಣೆ ಘೋಷಣೆಯಾಗಿರಲಿಲ್ಲ.