ರಾಯಚೂರು:ವ್ಯಕ್ತಿಯೊಬ್ಬ ಓಎಲ್‌ಎಕ್ಸ್‌ನಲ್ಲಿ ದ್ವಿಚಕ್ರ ವಾಹನ ಮಾರಾಟ ಮಾಡುವುದಾಗಿ ಫೋಟೋ ಪೋಸ್ಟ್ ಮಾಡಿ, ನಗರದ ಓರ್ವರಿಂದ ಫೋನ್ ಪೇ ಮೂಲಕ ತನ್ನ ಖಾತೆಗೆ 48 ಸಾವಿರ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಆನ್ಲೈನ್ ದೋಖಾ: ಸ್ಕೂಟಿ ಮಾರುವುದಾಗಿ 48 ಸಾವಿರ ರೂ. ವಂಚನೆ - online business
ಮೊಬೈಲ್ನಲ್ಲಿ ಒಎಲ್ಎಕ್ಸ್ ಆ್ಯಪ್ ಮೂಲಕ ಸುಜುಕಿ ಹೋಂಡಾ ಸ್ಕೂಟಿ ಮಾರುವುದಾಗಿ ನಂಬಿಸಿ 48 ಸಾವಿರ ರೂ. ಪಡೆದು ಮೋಸ ಮಾಡಿದ ಘಟನೆ ರಾಯಚೂರಿನಲ್ಲಿ ನಡೆದಿದೆ.

ಒಎಲ್ಎಕ್ಸ್ ಆ್ಯಪ್ ಮೂಲಕ ಮೋಸ
ಒಎಲ್ಎಕ್ಸ್ ಆ್ಯಪ್ ಮೂಲಕ ಮೋಸ
ಆನ್ಲೈನ್ ವ್ಯವಹಾರದ ಕುರಿತು ಪತ್ರಿಕಾ ಪ್ರಕಟಣೆಯ ಮೂಲಕ ಮಾಹಿತಿ
ದೂರು ದಾಖಲಿಸಿಕೊಂಡ ಎಸ್ಪಿ ಸಿ.ಬಿ ವೇದಮೂರ್ತಿ ಅವರು, ಜನರು ಆನ್ಲೈನ್ ವಹಿವಾಟು ನಡೆಸುವಾಗ ಎಚ್ಚರಿಕೆಯಿಂದ ಇರಬೇಕು. ವಸ್ತು ಪಡೆಯುವವರೆಗೂ ಹಣ ನೀಡದಂತೆ ಎಚ್ಚರಿಕೆ ನೀಡಿದ್ದಾರೆ. ವಂಚನೆಯ ಪ್ರಕರಣಗಳು ಕಂಡು ಬಂದಲ್ಲಿ ಕೂಡಲೇ ದೂರು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.