ರಾಯಚೂರು:ನ.22 ರಂದು ಆರ್. ಬಸವನಗೌಡ ತುರುವಿಹಾಳ ಕಾಂಗ್ರೆಸ್ ಪಕ್ಷವನ್ನು ತಮ್ಮ ಬೆಂಬಲಿಗರೊಂದಿಗೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ ಎಂದು ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ತಿಳಿಸಿದ್ದಾರೆ.
ಬಸವನಗೌಡ ತುರುವಿಹಾಳ ನ.22 ರಂದು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ - ಬೆಂಗಳೂರಿನಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತ ಸೇರ್ಪಡೆ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ತಮ್ಮ ಮುಖಂಡರೊಂದಿಗೆ ಸಾಂಕೇತಿಕವಾಗಿ ಡಿಕೆಶಿಯವರ ಮನೆಯಲ್ಲಿ ಬಸವನಗೌಡ ತುರುವಿಹಾಳ ಇತ್ತೀಚಿಗೆ ಸೇರ್ಪಡೆಯಾದ ಬಳಿಕ, ಬೆಂಗಳೂರಿನಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತ ಸೇರ್ಪಡೆಯಾಗಲು ನಿಗದಿ ಮಾಡಲಾಗಿತ್ತು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ತಮ್ಮ ಮುಖಂಡರೊಂದಿಗೆ ಸಾಂಕೇತಿಕವಾಗಿ ಡಿಕೆಶಿಯವರ ಮನೆಯಲ್ಲಿ ಬಸವನಗೌಡ ತುರುವಿಹಾಳ ಇತ್ತೀಚಿಗೆ ಕಾಂಗ್ರೆಸ್ ಸೇರ್ಪಡೆಯಾದ ಬಳಿಕ, ಬೆಂಗಳೂರಿನಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತ ಸೇರ್ಪಡೆಯಾಗಲು ನಿಗದಿ ಮಾಡಲಾಗಿತ್ತು. ಆದರೆ ಅನೇಕ ಮುಖಂಡರು, ಅಪಾರ ಬೆಂಬಲಿಗರು ಬಸವನಗೌಡ ತುರುವಿಹಾಳ ನೇತೃತ್ವದಲ್ಲಿ ಜತೆಯಲ್ಲಿ ಸೇರ್ಪಡೆಯಾಗಲು ಉತ್ಸಕರಾಗಿದ್ದಾರೆ.
ಹೀಗಾಗಿ ನ.22 ರಂದು ಮಸ್ಕಿಯಲ್ಲಿ ಬಹಿರಂಗ ಸಮಾವೇಶ ಆಯೋಜಿಸುವ ಮೂಲಕ ಸೇರ್ಪಡೆ ಕಾರ್ಯಕ್ರಮ ನಡೆಸಲು ತಿರ್ಮಾನಿಸಲಾಗಿದೆ. ಅಂದು ಕೆಪಿಸಿಸಿ, ಕಾಂಗ್ರೆಸ್ ಪ್ರಮುಖ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.