ಕರ್ನಾಟಕ

karnataka

ETV Bharat / state

ಮಸ್ಕಿ ಬೈ ಎಲೆಕ್ಷನ್‌ನಲ್ಲಿ ಬಿಜೆಪಿಗೇ ಕೈಕೊಡಲು ತುರುವಿಹಾಳ ರೆಡಿ.. - ಬಿಜೆಪಿಯಿಂದ ಪ್ರತಾಪ್‌ಗೌಡ ಪಾಟೀಲ್ ಟಿಕೆಟ್ ಪಕ್ಕಾ

ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಅಲ್ಪ ಮತಗಳಿಂದ ಸೋಲು ಕಂಡಿದ್ದ ಬಸವನಗೌಡ ತುರುವಿಹಾಳ, ಈ ಬಾರಿ ಬೈ ಎಲೆಕ್ಷನ್‌ಗೂ ಪ್ರಬಲ‌ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದ್ರೆ, ಬಿಜೆಪಿಯಿಂದ ಪ್ರತಾಪ್‌ಗೌಡ ಪಾಟೀಲ್ ಅವರಿಗೇ ಟಿಕೆಟ್ ಪಕ್ಕಾ ಆಗಿದೆ..

basanagowda turavihala
basanagowda turavihala

By

Published : Nov 7, 2020, 7:44 AM IST

ರಾಯಚೂರು :ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ಕಾಡಾ ಅಧ್ಯಕ್ಷ ಆರ್.ಬಸವನಗೌಡ ತುರುವಿಹಾಳ ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಮಾತು ರಾಜಕೀಯ ವಲಯದಲ್ಲಿ ದಟ್ಟವಾಗಿ ಹರಿದಾಡುತ್ತಿದೆ.

ಕಳೆದ ಬಾರಿ ಮಸ್ಕಿ ವಿಧಾನಸಭಾ ಕ್ಷೇತ್ರದಿಂದ ಅಲ್ಪಮತಗಳಿಂದ ಆರ್.ಬಸವನಗೌಡ ತುರುವಿಹಾಳ ಪರಾಜಿತಗೊಂಡಿದ್ದರು. ಆದರೆ, ಈ ಬಾರಿ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಪ್ರತಾಪ್‌ಗೌಡ ಪಾಟೀಲ್​ಗೆ ಟಿಕೆಟ್ ನೀಡಲಾಗುತ್ತಿದೆ.

ಆದ್ರೆ, ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಅಲ್ಪ ಮತಗಳಿಂದ ಸೋಲು ಕಂಡಿದ್ದ ಬಸವನಗೌಡ ತುರುವಿಹಾಳ, ಈ ಬಾರಿ ಬೈ ಎಲೆಕ್ಷನ್‌ಗೂ ಪ್ರಬಲ‌ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಆದ್ರೆ, ಬಿಜೆಪಿಯಿಂದ ಪ್ರತಾಪ್‌ಗೌಡ ಪಾಟೀಲ್ ಅವರಿಗೇ ಟಿಕೆಟ್ ಪಕ್ಕಾ ಆಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ತೊರೆದು ತುರುವಿಹಾಳ ಕಾಂಗ್ರೆಸ್ ಪಕ್ಷವನ್ನ ಸೇರಲಿದ್ದಾರೆ ಎನ್ನುವ ಮಾತು ಪ್ರಬಲವಾಗಿ ಕೇಳಿ ಬರುತ್ತಿದೆ.

For All Latest Updates

ABOUT THE AUTHOR

...view details