ರಾಯಚೂರು: ಪೇ ಸಿಎಂ ಅಭಿಯಾನ ನಡೆಸುವಾಗ ಕೆಲವರನ್ನು ಬಂಧಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಪ್ರತಿಕ್ರಿಯೆ ನೀಡಿದ್ದಾರೆ. ಪೇ ಸಿಎಂ ಪೋಸ್ಟರ್ ಹಾಕಿದಕ್ಕೆ ನಮ್ಮವರನ್ನು ಬಂಧಿಸಲಾಗಿದೆ. ರಾತ್ರಿ ಒಂದು ಗಂಟೆಗೆ ನಮ್ಮ ಕಚೇರಿ ಮೇಲೆ ಪೊಲೀಸರು ದಾಳಿ ಮಾಡುತ್ತಾರೆ. ಇದಕ್ಕೆಲ್ಲಾ ನಾವು ಹೆದರಲ್ಲ ಎಂದರು.
ಪರ್ಸೆಂಟೇಜ್ ಬಗ್ಗೆ ನಾವು ಹೇಳಿರುವುದು ಅಲ್ಲ, ಸರ್ಕಾರದ ಪರ್ಸೆಂಟೇಜ್ಗೆ ಬಗ್ಗೆ ಬೆಳಗಾವಿಯ ಗುತ್ತಿಗೆದಾರ ಸಂತೋಷ ಪಾಟೀಲ್ ಹೇಳಿದ್ದರು. ರಾಜ್ಯದಲ್ಲಿ ಪಿಎಸ್ಐ ಸ್ಕ್ಯಾಮ್ ಮಾಡಿದ್ದು ನಾವಾ?, ಭ್ರಷ್ಟಾಚಾರಕ್ಕೆ ಸಮಾಜ ಇದೆಯಾ?, ಜೀವಕ್ಕೆ ಬೆಲೆ ಇಲ್ವಾ?, ಮೃತ ಗುತ್ತಿಗೆದಾರ ಸಂತೋಷ ಯಾವ ಸಮುದಾಯದವರು?. ಅವರು ಲಿಂಗಾಯತ ಸಮುದಾಯದವರೇ, ಯಾಕೆ ನಮ್ಮನ್ನು ಜಾತಿ, ಧರ್ಮದ ಆಧಾರದ ಮೇಲೆ ಒಡೆಯುತ್ತೀರಾ, ಲಿಂಗಾಯತ ಸ್ವಾಮೀಜಿಗಳೇ ಪರ್ಸಂಟೇಜ್ ಬಗ್ಗೆ ಹೇಳಿರು ಎಂದು ಸರ್ಕಾರದ ವಿರುದ್ಧ ನಲಪಾಡ್ ಗುಡುಗಿದರು.