ರಾಯಚೂರು: ಮಾಂಸ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ನಗರದ ಅಶೋಕ್ ಡಿಪೋ ಹತ್ತಿರವಿರುವ ಕಸಾಯಿಖಾನೆ ಬಳಿ ಮಾಂಸ ಮಾರಾಟ ಮಾಡಲಾಗುತ್ತಿದೆ. ಆದ್ರೆ ಕಸಾಯಿಖಾನೆ ಬಳಿ ಜಾನುವಾರುಗಳ ಚರ್ಮವನ್ನ ವಿಲೇವಾರಿ ಮಾಡದೇ ಹಾಗೇ ಬಿಸಾಡಿದ ಪರಿಣಾಮ ಸಾಂಕ್ರಾಮಿಕ ಕಾಯಿಲೆ ಭೀತಿ ಎದುರಾಗಿದೆ.
ರಾಯಚೂರು: ಕಸಾಯಿಖಾನೆ ಬಳಿ ಮಾಂಸ ಮಾರಾಟ, ಸಾಂಕ್ರಾಮಿಕ ರೋಗ ಹರಡುವ ಭೀತಿ - bad smell in raichur meat shops
ವ್ಯಾಪಾರಿಗಳು ರಾಯಚೂರಿನ ಅಶೋಕ್ ಡಿಪೋ ಬಳಿ ಜಾನುವಾರಗಳನ್ನ ತಂದು ಮಾಂಸವನ್ನ ಮಾರಾಟ ಮಾಡುತ್ತಾರೆ. ಆದ್ರೆ ಕೇವಲ ಮಾಂಸವನ್ನ ಮಾರಾಟ ಮಾಡಿ, ಅದರ ಚರ್ಮವನ್ನ ಅಲ್ಲೆ ಬಿಸಾಡಲಾಗುತ್ತಿದೆ. ಇದರ ಪರಿಣಾಮ ಕಸಾಯಿಖಾನೆ ಬಳಿ ಭಾರೀ ದುರ್ನತಾ ಬರುತ್ತಿದೆ.
ದುರ್ನಾತದ ಕೇರಿಯಾಯ್ತು ರಾಯಚೂರು ನಗರ
ಬೆಳಗ್ಗೆ ಮಾರಾಟಗಾರರು ಜಾನುವಾರಗಳನ್ನ ತಂದು ಮಾಂಸವನ್ನು ಮಾರಾಟ ಮಾಡುತ್ತಾರೆ. ಆದ್ರೆ ಕೇವಲ ಮಾಂಸವನ್ನ ಮಾರಾಟ ಮಾಡಿ, ಅದರ ಚರ್ಮವನ್ನ ಅಲ್ಲೆ ಬಿಸಾಡಲಾಗುತ್ತಿದೆ. ಇದರ ಪರಿಣಾಮ ಕಸಾಯಿಖಾನೆ ಬಳಿ ಭಾರೀ ದುರ್ನಾತ ಬರುತ್ತಿದ್ದು, ಸುತ್ತಮುತ್ತ ಇರುವ ಉರಕುಂದಿ ಈರಣ್ಣ ಕಾಲೋನಿ, ಅಶೋಕ್ ಡಿಪೋ ಜನರಿಗೆ ಸಾಂಕ್ರಾಮಿಕ ಕಾಯಿಲೆಯ ಭೀತಿ ಎದುರಾಗಿದೆ.