ರಾಯಚೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ತಲೆತಿರುಕರ ರೀತಿ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಮಾತನಾಡಿದರು ತಾಲೂಕಿನ ಗಿಲ್ಲೆಸೂಗೂರು ಗ್ರಾಮದಲ್ಲಿ ಇಂದು ನಡೆದ ಜನಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ಬಾರಿ 150ಕ್ಕೂ ಅಧಿಕ ಸ್ಥಾನ ಗೆಲುವು ಸಾಧಿಸುವ ಮೂಲಕ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಇದನ್ನ ತಡೆಯಲು ಯಾವ ಶಕ್ತಿಗೂ ಸಾಧ್ಯವಿಲ್ಲ. ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಸರ್ಕಾರದ ಖಜಾನೆ ಲೂಟಿ ಮಾಡಿದೆ. ಜನರ ಹಣ ಕಾಂಗ್ರೆಸ್ ಹಗಲು ದರೋಡೆ ಮಾಡಿದೆ. ಯುಪಿಎ ಸರ್ಕಾರ ಕಲ್ಲಿದ್ದಲು ಹಗರಣ ನಡೆದಿದೆ. ಯುಪಿಎ ಸರ್ಕಾರದ ಹಗರಣದಲ್ಲಿ ನಿಮ್ಮ ಪಾಲು ಎಷ್ಟು ಇದೆ ಅಂತ ಮೊದಲು ರಾಹುಲ್ ಗಾಂಧಿ ಹೇಳಲಿ ಎಂದರು.
ಡೆಕ್ಕನ್ ಹೆರಾಲ್ಡ್ ಕೇಸ್ನಲ್ಲಿ ಬೇಲ್ ಮೇಲೆ ಇದ್ದಾರೆ. ರಾಜ್ಯದಲ್ಲಿ ಮತ್ತೆ ನೀವು ಅಧಿಕಾರಕ್ಕೆ ಬರುತ್ತೇವೆ ಎನ್ನುವ ನಿಮ್ಮ ಕನಸು ಈಡೇರುವುದಿಲ್ಲ ಸಿದ್ದರಾಮಯ್ಯನವರೇ, ನಿಮ್ಮ ಕೈಯಲ್ಲಿನ ವಾಚ್ ಬಗ್ಗೆ ಜನರಿಗೆ ಉತ್ತರ ನೀಡಿ. ಕಾಂಗ್ರೆಸ್ ಪಕ್ಷ ಆಡಳಿತದ ಅವಧಿಯಲ್ಲಿ ತಾವು ಮಾಡಿದ ಸಾಲ ನಮ್ಮ ಮೋದಿ ಸರ್ಕಾರ ತೀರಿಸಿದೆ. ಕೋವಿಡ್ ವೇಳೆ 80 ಕೋಟಿ ಜನರಿಗೆ ಉಚಿತ ಪಡಿತರ ನೀಡಿದ್ದೇವೆ. ಕೊರೊನಾ ವೇಳೆಯಲ್ಲಿ ಅಸಂಘಟಿತ ಕಾರ್ಮಿಕರಿಗೆ ಸಹಾಯಧನ ನೀಡಿದ್ದೇವೆ. ರೈತರಿಗೆ ಕಿಸಾನ್ ಸನ್ಮಾನ ಹಣ ನೀಡಿದ್ದೇವೆ ಎಂದು ಕೇಂದ್ರ ಸರ್ಕಾರದ ಯೋಜನೆ ಅನುದಾನಗಳ ಬಗ್ಗೆ ತಿಳಿಸಿದರು.
ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡಬೇಡಿ:ಕಲ್ಯಾಣ ಕರ್ನಾಟಕಕ್ಕೆ 3 ಸಾವಿರ ಇದ್ದ ಅನುದಾನ 5 ಸಾವಿರಕ್ಕೆ ಏರಿಕೆ ಮಾಡುತ್ತೇವೆ. ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿಗೆ ಎಚ್ಚರಿಕೆ ನೀಡಿದರು. ನೀಡಿದವರು, ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡಬೇಡಿ. ನಮ್ಮ ಸರ್ಕಾರ ಬಂದಾಗ ನಿಮ್ಮ ಹಗರಣ ತನಿಖೆ ಮಾಡುತ್ತೇವೆ. ನಿಮಗೆ ಎಲ್ಲಿ ನಿಲ್ಲಿಸಬೇಕು ಎಂಬುವುದು ನಮಗೆ ಗೊತ್ತಿದೆ. ರಾಹುಲ್ ಗಾಂಧಿ ಬಚ್ಚಾ ಇದ್ದಾನೆ ಎಂದು ಲೇವಡಿ ಮಾಡಿದರು.
ಇನ್ನೂ ಸಚಿವ ಶ್ರೀರಾಮುಲು ಮಾತನಾಡಿ, ಬಿಎಸ್ವೈ ಮತ್ತು ಬಸವರಾಜ ಬೊಮ್ಮಾಯಿ ಸೇರಿ ಜನ ಸಂಕಲ್ಪ ಶುರು ಮಾಡಿದ್ದಾರೆ. ರಾಯಚೂರು ಗ್ರಾಮೀಣ ಕ್ಷೇತ್ರದಿಂದ ಶುರು ಮಾಡಿದ್ದಾರೆ. ಜನ ಸಂಕಲ್ಪ ಯಾತ್ರೆ ಮೇಲೆ ರಾಘವೇಂದ್ರ ಸ್ವಾಮೀಜಿಗಳ ಆರ್ಶಿವಾದ ಇರುತ್ತೆ. ನಾವು ಹಲವಾರು ಸಂಕಲ್ಪ ಯಾತ್ರೆ ನೋಡಿದ್ದೇವೆ. 1991ರಲ್ಲಿ ದೇಶದಲ್ಲಿ 35 ಸಂಸದರು ಇದ್ದರು.
ಸಂಕಲ್ಪ ಯಾತ್ರೆಯಿಂದ 120 ಸ್ಥಾನ ಸಂಸದರು ಗೆಲ್ಲಲು ಸಾಧ್ಯವಾಯ್ತು. 150ರ ಗುರಿ ಇಟ್ಟುಕೊಂಡು ಬೊಮ್ಮಾಯಿ ಮತ್ತು ಬಿಎಸ್ವೈ ಮುಂದಾಗಿದ್ದಾರೆ. ಅವರಿಗೆ ಶಕ್ತಿ ತುಂಬುವ ಕೆಲಸ ನಾವು ಮಾಡಬೇಕಾಗಿದೆ ಎಂದರು. ಕೇಂದ್ರದಲ್ಲಿ ಮೋದಿ ಅಮಿತ್ ಶಾ ಜೋಡಿ ಇದ್ದಂತೆ, ರಾಜ್ಯದಲ್ಲಿ ಬೊಮ್ಮಾಯಿ ಮತ್ತು ಬಿಎಸ್ವೈ ಜೋಡಿಯಾಗಿದೆ. ಮಹಾಭಾರತದಲ್ಲಿ ಭೀಷ್ಮ ಸ್ಥಾನದಲ್ಲಿ ಯಡಿಯೂರಪ್ಪ ಇದ್ದಾರೆ. 150ರ ಸ್ಥಾನ ಮುಟ್ಟಲು ನಾವು ರೆಡಿ ಇದ್ದೇವೆ. ಯಡಿಯೂರಪ್ಪ ಲಿಂಗಾಯತ ಸಮುದಾಯದಲ್ಲಿ ಹುಟ್ಟಿದ್ರು, ಕೆಳ ಸಮುದಾಯದ ಪರವಾಗಿ ಧ್ವನಿ ಎತ್ತಿದ ನಾಯಕರಾಗಿದ್ದಾರೆ.
ಮೀಸಲಾತಿ ವಿಚಾರದಲ್ಲಿ ಹಿಂದೆ ಸರಿದಿಲ್ಲ: ಒಂದು ವಿಧಾನಸಭಾ ಕ್ಷೇತ್ರದಿಂದ ಈವರೆಗೆ ರಾಜ್ಯದಲ್ಲಿ ಪಕ್ಷ ಬೆಳೆಸಿದ್ದಾರೆ. ವಾಲ್ಮೀಕಿ ಸಮುದಾಯವರು ಮೀಸಲಾತಿಗಾಗಿ ಹೋರಾಟ ನಡೆದಿತ್ತು. ಯಾವ ಸರ್ಕಾರ ಬಂದ್ರೂ ಮೀಸಲಾತಿ ಕೊಟ್ಟಿರಲಿಲ್ಲ. ನಮ್ಮ ಸರ್ಕಾರ ಮೀಸಲಾತಿ ವಿಚಾರದಲ್ಲಿ ಹಿಂದೆ ಸರಿದಿಲ್ಲ. ಕೊಟ್ಟ ಮಾತಿನಂತೆ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ನೀಡಿದ್ದಾರೆ.
ವಾಲ್ಮೀಕಿ ಜಯಂತಿ ಶುರು ಮಾಡಿದ್ದು, ನಿಗಮ ಮಾಡಿದ್ದು, ಯಡಿಯೂರಪ್ಪನವರು. ಸಿದ್ದರಾಮಯ್ಯ ನಿನ್ನೆ - ಮೊನ್ನೆ ಕಾಂಗ್ರೆಸ್ಗೆ ಬಂದು ಬುಗರಿಯಂತೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಮೀಸಲಾತಿ ಹೆಚ್ಚಳ ಮಾಡಿದ ಸಿಎಂ ಬಗ್ಗೆ ವರ್ಣಿಸಿದ ಅವರು, ತುಂಬಿದ ಕೊಡ ತುಳುಕುವುದಿಲ್ಲ. ಹೋರಾಟ ಮಾಡಿ ಹಲವಾರು ಜನರು ಮುದುಕರು ಆಗಿದ್ದಾರೆ. ಆದರೂ ಮೀಸಲಾತಿ ನೀಡಿರಲಿಲ್ಲ. ಈಗ ಮೀಸಲಾತಿ ಸಿಕ್ಕಿದೆ. ನಮ್ಮ ಮಕ್ಕಳು ನೌಕರಿ ಮಾಡುತ್ತಾರೆ. ಮೀಸಲಾತಿ ಕೆಲವೇ ದಿನಗಳಲ್ಲಿ ಗೆಜೆಟ್ ಆಗುತ್ತೆ ಎಂದು ಹೇಳಿದರು.
ಓದಿ:ರಾಜಕೀಯ ಲಾಭ ಪಡೆಯಲು ಅಡಕೆ ಆಮದು ಬಗ್ಗೆ ಕೆಲವರು ಗುಲ್ಲೆಬ್ಬಿಸುತ್ತಿದ್ದಾರೆ: ಆರಗ ಜ್ಞಾನೇಂದ್ರ ಆರೋಪ