ಕರ್ನಾಟಕ

karnataka

ನಾಳೆಯಿಂದ ಸೇವೆ ಸ್ಥಗಿತಗೊಳಿಸುವುದಾಗಿ ಆಯುಷ್ ವೈದ್ಯರ ಎಚ್ಚರಿಕೆ

By

Published : May 22, 2020, 3:54 PM IST

ತಮ್ಮ ಬೇಡಿಕೆ ಈಡೇರಿಸಲು ನಿರ್ಲಕ್ಷ್ಯ ತೋರಿದ ಸರ್ಕಾರದ ಧೋರಣೆ ವಿರೋಧಿಸಿ ಜಿಲ್ಲೆಯ ಲಿಂಗಸೂಗುರು ತಾಲೂಕಿನಲ್ಲಿ ರಾಜ್ಯದ ಗುತ್ತಿಗೆ ಆಯುಷ್ ವೈದ್ಯರು ಮತ್ತು ಸಹ ಆಯುಷ್ ವಿದ್ಯಾರ್ಥಿಗಳ ಸೇವೆ ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.

AYUSH doctors warned to shut down service from the may 23rd
ಮೇ. 23ರ ರಿಂದ ಸೇವೆ ಸ್ಥಗಿತಗೊಳಿಸುವುದಾಗಿ ಎಚ್ಚರಿಸಿದ ಆಯುಷ್ ವೈದ್ಯರು

ರಾಯಚೂರು: ಬೇಡಿಕೆ ಈಡೇರಿಸಲು ಸರ್ಕಾರ ಮುಂದಾಗದ ಹಿನ್ನೆಲೆ ಜಿಲ್ಲೆಯ ಲಿಂಗಸೂಗುರು ತಾಲೂಕಿನಲ್ಲಿ ರಾಜ್ಯದ ಗುತ್ತಿಗೆ ಆಯುಷ್ ವೈದ್ಯರು ಮತ್ತು ಸಹ ಆಯುಷ್ ವಿದ್ಯಾರ್ಥಿಗಳ ಸೇವೆಯನ್ನು ನಾಳೆಯಿಂದ ಸ್ಥಗಿತಗೊಳಿಸುವುದಾಗಿ ಎಚ್ಚರಿಸಿದ್ದಾರೆ.

ಶುಕ್ರವಾರ ತಾಲೂಕು ಆರೋಗ್ಯಾಧಿಕಾರಿ ಡಾ. ರುದ್ರಗೌಡ ಪಾಟೀಲ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಆಯುಷ್​ ಫೆಡರೇಷನ್ ಆಫ್ ಇಂಡಿಯಾದ ತಾಲೂಕು ಘಟಕದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಈಗಾಗಲೇ ತಮ್ಮ ಬೇಡಿಕೆ ಈಡೇರಿಸಲು ನಿರ್ಲಕ್ಷ್ಯ ತೋರಿದ ಸರ್ಕಾರದ ಧೋರಣೆ ವಿರೋಧಿಸಿ ಮೇ 5ರಿಂದ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಮೌನ ಪ್ರತಿಭಟನೆ ನಡೆಸುತ್ತ ಬಂದಿದ್ದೇವೆ ಎಂದು ಸಿಬ್ಬಂದಿ ಹೇಳಿದರು.

ಸೇವೆ ಸಲ್ಲಿಸುತ್ತಿರುವ ಆಯುಷ್ ವೈದ್ಯರಿಗೆ ನಿಗದಿತ ವೇತನ, ಅಲೋಪಥಿ ಔಷಧಿ ವಿತರಣೆ, ಸಹ ಆಯುಷ್​ ವಿದ್ಯಾರ್ಥಿಗಳಿಗೆ(ಯುಜಿ, ಪಿಜಿ) ಶಿಷ್ಯ ವೇತನ ನೀಡುವಲ್ಲಿನ ತಾರತಮ್ಯ ಪರಿಹರಿಸಬೇಕು. ಇಲ್ಲದೆ ಹೋದಲ್ಲಿ ಮೇ 23ರಿಂದ ಸೇವೆ ಸ್ಥಗಿತಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ABOUT THE AUTHOR

...view details