ರಾಯಚೂರು:ಅಯೋಧ್ಯೆ ವಿವಾದಿತ ಭೂಮಿ ವಿಚಾರಕ್ಕೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ದೇಶದ ಸಾಮರಸ್ಯಕ್ಕೆ ನಾಂದಿ ಹಾಡಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಅಯೋಧ್ಯೆ ತೀರ್ಪು ದೇಶದ ಸಾಮರಸ್ಯಕ್ಕೆ ನಾಂದಿಯಾಗಲಿದೆ: ಪೇಜಾವರ ಶ್ರೀ - ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ
ಅಯೋಧ್ಯೆ ವಿವಾದಿತ ಭೂಮಿ ವಿಚಾರಕ್ಕೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ದೇಶದ ಸಾಮರಸ್ಯಕ್ಕೆ ನಾಂದಿ ಹಾಡಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಅಯೋಧ್ಯೆ ತೀರ್ಪು ದೇಶದಲ್ಲಿ ಶಾಂತಿ, ಸೌಹರ್ದತೆ, ಸಾಮರಸ್ಯಕ್ಕೆ ನಾಂದಿ ಹಾಡುವ ಮೂಲಕ ಏಕತೆಯನ್ನ ಸಾರಿದೆ. ಮಂದಿರಗಳು ಒಂದೇ ಧರ್ಮಕ್ಕೆ ಹಾಗೂ ಸಮಾಜಕ್ಕೆ ಸೀಮಿತವಾಗದೆ ಎಲ್ಲಾ ಧರ್ಮೀಯರು ಪ್ರವೇಶಿಸಬೇಕು. ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ 5 ಎಕರೆ ಜಮೀನು ನೀಡಲಾಗಿದ್ದು, ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದರು.
ಕೇಂದ್ರ ಸರ್ಕಾರ ಟ್ರಸ್ಟ್ ಸ್ಥಾಪಿಸಿ ಆದಷ್ಟು ಬೇಗ ಅಂದರೆ ಒಂದು ವರ್ಷದಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕು ಎಂದರು. ಇನ್ನು ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶ ವಿಸ್ತೃತ ಪೀಠಕ್ಕೆ ವರ್ಗಾವಣೆ ಸಂಬಂಧ ಕೋರ್ಟ್ ತೀರ್ಪು ಬರುವರೆಗೂ ನಾನು ಏನೂ ಹೇಳುವುದಿಲ್ಲ, ಕಾದು ನೋಡಣ ಎಂದರು.