ರಾಯಚೂರು:ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಕೊರೊನಾ ಮಾದರಿಯ ಪ್ರತಿಕೃತಿ ಮಾಡುವ ಮೂಲಕ ಮಹಾಮಾರಿ ಸೋಂಕು ಹರಡುವಿಕೆಯನ್ನ ನಿಯಂತ್ರಿಸುತ್ತಿರುವ ವೈದ್ಯರು, ಪೊಲೀಸರಿಗೆ ಗೌರವ ಸಲ್ಲಿಸಲಾಗುತ್ತಿದೆ.
ಸಿಂಧನೂರಲ್ಲಿ ಮಹಾಮಾರಿ ಕೊರೊನಾಗೆ ರಸ್ತೆಯಲ್ಲೇ ದಿಗ್ಬಂಧನ! - raichuru corona news
ಕೊರೊನಾ ವೈರಸ್ ವಿರುದ್ಧ ಹಲವಾರು ಬಗೆಯಲ್ಲಿ ಜಾಗೃತಿ ಅಭಿಯಾನ ನಡೆಸಲಾಗ್ತಿದೆ. ಆ ಸಾಲಿಗೆ ರಾಯಚೂರಿನಲ್ಲಿ ನಡೆಸಲಾದ ವಿಭಿನ್ನ ಜಾಗೃತಿ ಗಮನ ಸೆಳೆಯುತ್ತಿದೆ. ಜಿಲ್ಲೆಯ ಸಿಂಧನೂರು ಪಟ್ಟಣದ ಗಾಂಧಿ ವೃತ್ತದ ಬಳಿ ಈ ಮಾದರಿ ಪ್ರತಿಕೃತಿಯನ್ನು ಇರಿಸುವ ಮೂಲಕ ನಾಗರಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ರಾಯಚೂರಲ್ಲಿ ಕೊರೊನಾ ವೈರಸ್ ವಿರುದ್ಧ ವಿಭಿನ್ನ ಜಾಗೃತಿ: ರಸ್ತೆ ಮೇಲೆ ದೈತ್ಯ ಕೊರೊನಾ ಚಿತ್ರ
ಸಿಂಧನೂರು ಪಟ್ಟಣದ ಗಾಂಧಿ ವೃತ್ತದ ಬಳಿ ಈ ಕೊರೊನಾ ಮಾದರಿಯನ್ನು ಇರಿಸಲು ಉಮೇಶ ಕುಮಾರ್ ಎಂಬುವರ ತಂಡ ಶ್ರಮವಹಿಸಿದೆ.
ಜಗತ್ತಿಗೆ ಕಂಟಕವಾಗಿ ಕಾಡುತ್ತಿರುವ ಮಹಾಮಾರಿ ಕೊರೊನಾ ಸೋಂಕಿನ ರಾಕ್ಷಸ ರೂಪ, ಅದರ ವಿರುದ್ಧ ಅವಿರತವಾಗಿ ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್ ಇಲಾಖೆ, ವೈದ್ಯರ ತಂಡ, ಪೌರಕಾರ್ಮಿಕರ ಪ್ರತಿಕೃತಿಯನ್ನ ರಚಿಸಲಾಗಿದೆ.