ರಾಯಚೂರು:ಕೃಷ್ಣ ನದಿ ಪ್ರವಾಹದಲ್ಲಿ ತೆರಳುತ್ತಿದ್ದ ಆಂಬುಲೆನ್ಸ್ಗೆ ದಾರಿ ತೋರಿಸಿ ಸಾಹಸ ಮೆರೆದಿದ್ದ ರಾಯಚೂರು ಜಿಲ್ಲೆಯ ಬಾಲಕನಿಗೆ ಕೇರಳದಲ್ಲಿ ಸನ್ಮಾನಿಸಲಾಗಿದೆ.
ಆಂಬುಲೆನ್ಸ್ಗೆ ದಾರಿ ತೋರಿಸಿ ಸಾಹಸ ಮೆರೆದಿದ್ದ ಬಾಲಕನಿಗೆ ಕೇರಳದಲ್ಲಿ ಸನ್ಮಾನ - krishna river flood
ಕೃಷ್ಣ ನದಿ ಪ್ರವಾಹದಲ್ಲಿ ತೆರಳುತ್ತಿದ್ದ ಆ್ಯಂಬುಲೆನ್ಸ್ಗೆ ದಾರಿ ತೋರಿಸಿ ಸಾಹಸ ಮೆರೆದಿದ್ದ ರಾಯಚೂರು ಜಿಲ್ಲೆಯ ಬಾಲಕನಿಗೆ ಕೇರಳದಲ್ಲಿ ಸನ್ಮಾನಿಸಲಾಗಿದೆ.
![ಆಂಬುಲೆನ್ಸ್ಗೆ ದಾರಿ ತೋರಿಸಿ ಸಾಹಸ ಮೆರೆದಿದ್ದ ಬಾಲಕನಿಗೆ ಕೇರಳದಲ್ಲಿ ಸನ್ಮಾನ](https://etvbharatimages.akamaized.net/etvbharat/prod-images/768-512-4412803-thumbnail-3x2-sow.jpg)
ಜಿಲ್ಲೆಯ ದೇವದುರ್ಗ ತಾಲೂಕಿನ ಹಿರೇರಾಯಕುಂಪಿ ಗ್ರಾಮದ ಬಾಲಕ ವೆಂಕಟೇಶ್ಗೆ ಕೇರಳದ ಕ್ಯಾಲಿಕಟ್ನಲ್ಲಿ ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆ ಮತ್ತು ಪಿಟಿಎ ಸಂಘದಿಂದ ಸನ್ಮಾನಿಸಿ ಗೌರವಿಸಲಾಗಿದೆ. ಆಗಸ್ಟ್ ತಿಂಗಳಲ್ಲಿ ರಾಯಚೂರು ಜಿಲ್ಲೆಯಲ್ಲಿ ಕೃಷ್ಣ ನದಿ ಪ್ರವಾಹ ಉಂಟಾಗಿತ್ತು. ದೇವದುರ್ಗ ತಾಲೂಕಿನ ಹಿರೇರಾಯನಕುಂಪಿ ಗ್ರಾಮಕ್ಕೂ ನದಿ ನೀರು ನುಗ್ಗಿ, ಗ್ರಾಮದ ಸೇತುವೆ ಮುಳುಗಡೆಯಾಗಿತ್ತು. ಮುಳುಗಡೆಯಾದ ಸೇತುವೆ ಮೇಲಿಂದ ಮೃತ ದೇಹ ಹೊತ್ತು ಸಾಗುತ್ತಿದ್ದ ಅಂಬುಲೆನ್ಸ್ಗೆ ಬಾಲಕ ವೆಂಕಟೇಶ್, ಜೀವದ ಹಂಗು ತೊರೆದು ದಾರಿತೋರಿಸಿ ಸಾಹಸ ಮೆರೆದಿದ್ದ.
ಈ ಬಾಲಕನ ಸಾಹಸಕ್ಕೆ ರಾಯಚೂರು ಜಿಲ್ಲಾಡಳಿತ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಸಾಹಸ ಪ್ರಶಸ್ತಿ ನೀಡಿ ಗೌರವಿಸಿತ್ತು. ಈಗ ಸಾಹಸಿ ವೆಂಕಟೇಶ್ ಧೈರ್ಯ ಮೆಚ್ಚಿ ಕೇರಳದಲ್ಲಿಯೂ ಸನ್ಮಾನ ಮಾಡಲಾಗಿದೆ. ಅಲ್ಲದೇ, ಕೇರಳದ ರೆಡಿಯೋ ಎಫ್ಎಂನಲ್ಲಿ ಈತನ ಸಂದರ್ಶನ ಮಾಡಲಾಗಿದೆ. ವೆಂಕಟೇಶ್ ಸಾಹಸ ಮೆರೆದಿದ್ದ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿ,ಜನರ ಮೆಚ್ಚುಗೆಗೆ ಕಾರಣವಾಗಿತ್ತು.