ರಾಯಚೂರು:20 ಮಂದಿಯ ಗುಂಪೊಂದು ರಾಯಚೂರು ತಾಲೂಕಿನ ಶಕ್ತಿನಗರದ ವೈಟಿಪಿಎಸ್ ಗುತ್ತಿಗೆದಾರನ ಮೇಲೆ ಹಲ್ಲೆ ನಡೆಸಿ ಹಣ ಕಸಿದುಕೊಂಡು ಜೀವ ಬೆದರಿಕೆ ಹಾಕಿದೆ.
ರಾಯಚೂರಿನ ವೈಟಿಪಿಎಸ್ ಗುತ್ತಿಗೆದಾರನ ಮೇಲೆ ಮಾರಣಾಂತಿಕ ಹಲ್ಲೆ, ಜೀವ ಬೆದರಿಕೆ - Raichur Contractor
ರಾಯಚೂರು ತಾಲೂಕಿನ ಶಕ್ತಿನಗರದ ವೈಟಿಪಿಎಸ್ ಗುತ್ತಿಗೆದಾರನ ಮೇಲೆ 20 ಮಂದಿಯ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿ ಹಣ ಕಸಿದುಕೊಂಡು ಜೀವ ಬೆದರಿಕೆ ಹಾಕಿದೆ.
ರಾಯಚೂರಿನ ವೈಟಿಪಿಎಸ್ ಗುತ್ತಿಗೆದಾರನ ಮೇಲೆ ಮಾರಣಾಂತಿ ಹಲ್ಲೆ, ಜೀವ ಬೆದರಿಕೆ
ಯದ್ಲಾಪುರ ನಿವಾಸಿ ಗೌಸ್ ಸೇರಿದಂತೆ ಸುಮಾರು 20 ಮಂದಿಯ ಗುಂಪೊಂದು ಹರ್ಷನ್ ಎಂಬ ಗುತ್ತಿಗೆದಾರನ ಮನೆಗೆ ನುಗ್ಗಿ 20 ಲಕ್ಷ ರೂಪಾಯಿ ನೀಡುವಂತೆ ಒತ್ತಾಯಿಸಿದೆ. ಗುತ್ತಿಗೆದಾರ ಹಣ ಕೊಡಲು ನಿರಾಕರಿಸಿದಾಗ ಮಾರಣಾಂತಿಕ ಹಲ್ಲೆ ಮಾಡಿದೆ. ಆನಂತರ 5 ಲಕ್ಷ ರೂಪಾಯಿಯನ್ನು ಕೂಡಲೇ ಖಾತೆಗೆ ಕಳುಹಿಸಿಕೊಂಡು ಇನ್ನೂ 15 ಲಕ್ಷ ರೂ ನೀಡಬೇಕೆಂದು ಬೆದರಿಸಿ ಹೋಗಿದೆ.
ಘಟನೆಯಿಂದ ಗಾಬರಿಗೊಂಡ ಗುತ್ತಿಗೆದಾರ, ಸ್ಥಳೀಯ ಶಕ್ತಿನಗರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣವನ್ನು ಭೇದಿಸಲು ಪೊಲೀಸರ ವಿಶೇಷ ತಂಡ ರಚನೆ ಮಾಡಿದ್ದು, ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ.
Last Updated : May 11, 2020, 4:20 PM IST