ಕರ್ನಾಟಕ

karnataka

ಮಸ್ಕಿಯಲ್ಲಿ ಹಲ್ಲೆಗೊಳಗಾಗಿದ್ದ ವ್ಯಕ್ತಿ ಸಾವು: ಕಾಂಗ್ರೆಸ್​ ವಿರುದ್ಧ ಹಲ್ಲೆ ಆರೋಪ

By

Published : Apr 10, 2021, 12:20 PM IST

Updated : Apr 10, 2021, 12:57 PM IST

maski
ಮಸ್ಕಿಯಲ್ಲಿ ಹಲ್ಲೆಗೊಳಗಾಗಿದ್ದ ವ್ಯಕ್ತಿ ಸಾವು

12:12 April 10

ಮಸ್ಕಿಯಲ್ಲಿ ಹಲ್ಲೆಗೊಳಗಾಗಿದ್ದ ವ್ಯಕ್ತಿ ಸಾವು

ಸ್ಥಳಕ್ಕೆ ಪೊಲೀಸರ ಭೇಟಿ, ಪರಿಶೀಲನೆ

ರಾಯಚೂರು: ಮಸ್ಕಿಯ ಹಾಲಾಪುರ ಗ್ರಾಮದಲ್ಲಿ ಹಲ್ಲೆಗೊಳಗಾಗಿದ್ದ ವ್ಯಕ್ತಿ ಸಾವನ್ನಪ್ಪಿದ್ದು, ಕಾಂಗ್ರೆಸ್​ನವರಿಂದ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

ಜಿಲ್ಲೆಯ ಮಸ್ಕಿ ತಾಲೂಕಿನ ನಾಗರಾಜ ಎಂಬ ವ್ಯಕ್ತಿಯ ಮೇಲೆ ನಿನ್ನೆ ಹಲ್ಲೆಯಾಗಿದ್ದು, ಇಂದು ಬೆಳಗ್ಗೆ ನಾಗರಾಜ (45)ಮೃತಪಟ್ಟಿದ್ದಾನೆ. ಸದ್ಯ ಮಸ್ಕಿ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್ ನಡೆಯುತ್ತಿರುವ ಹಿನ್ನೆಲೆ ಕಾಂಗ್ರೆಸ್ ನಿಂದ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿದ್ದು, ಸ್ಥಳಕ್ಕೆ ಕವಿತಾಳ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ, ತನಿಖೆ ಕೈಗೊಂಡಿದ್ದಾರೆ. ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Last Updated : Apr 10, 2021, 12:57 PM IST

ABOUT THE AUTHOR

...view details