ರಾಯಚೂರು: ರಾಜ್ಯಸಭಾ ಸದಸ್ಯ ದಿವಂಗತ ಅಶೋಕ ಗಸ್ತಿ ಅವರ ಪತ್ನಿಗೆ ರಾಜ್ಯಸಭಾ ಸದಸ್ಯ ಸ್ಥಾನ ನೀಡಿ, ರಾಜ್ಯದ ಪರಿಶಿಷ್ಟ ಪಂಗಡದ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ನಗರದ ಉಸ್ಮಾನಿಯಾ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಎನ್.ಮಹಾವೀರ ಒತ್ತಾಯಿಸಿದರು.
ದಿ. ಅಶೋಕ ಗಸ್ತಿ ಪತ್ನಿಗೆ ರಾಜ್ಯಸಭಾ ಸದಸ್ಯ ಸ್ಥಾನ ನೀಡುವಂತೆ ಒತ್ತಾಯ - ದಿ. ಅಶೋಕ ಗಸ್ತಿ ಅವರ ಪತ್ನಿಗೆ ರಾಜ್ಯಸಭಾ ಸದಸ್ಯ ಸ್ಥಾನ
ದಿ. ಅಶೋಕ ಗಸ್ತಿ ಅವರ ಪತ್ನಿಗೆ ರಾಜ್ಯಸಭಾ ಸ್ಥಾನ ನೀಡಬೇಕು ಎಂದು ಉಸ್ಮಾನಿಯಾ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಎನ್.ಮಹಾವೀರ ಒತ್ತಾಯಿಸಿದ್ದಾರೆ.
![ದಿ. ಅಶೋಕ ಗಸ್ತಿ ಪತ್ನಿಗೆ ರಾಜ್ಯಸಭಾ ಸದಸ್ಯ ಸ್ಥಾನ ನೀಡುವಂತೆ ಒತ್ತಾಯ Raichur](https://etvbharatimages.akamaized.net/etvbharat/prod-images/768-512-8942448-812-8942448-1601086292724.jpg)
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ. ಅಶೋಕ ಗಸ್ತಿ ಕಳೆದ 40 ವರ್ಷಗಳಿಂದ ಬಿಜೆಪಿ ಪಕ್ಷ ಸಂಘಟನೆ ಕಾರ್ಯ ಮಾಡಿದ್ದಾರೆ. ಪ್ರಾಮಾಣಿಕ ಮತ್ತು ನಿಷ್ಠೆಯಿಂದ ಪಕ್ಷದ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಮಾಡಿದ್ದು, ದೇಶದಲ್ಲಿನ ಸವೀತಾ ಸಮಾಜಕ್ಕೆ ಸೇರಿದ ಏಕೈಕ ಸದಸ್ಯರಾಗಿದ್ದರು. ರಾಯಚೂರು ಜಿಲ್ಲೆಗೆ 28 ವರ್ಷಗಳ ನಂತರ ರಾಜ್ಯಸಭೆ ಸದಸ್ಯರನ್ನಾಗಿ ಬಿಜೆಪಿ ನೀಡಿತ್ತು. ಅದರೆ ಅವರ ಅಕಾಲಿಕ ಮರಣದಿಂದ ಪಕ್ಷ, ಕುಟುಂಬಕ್ಕೆ ಹಾಗೂ ಸವಿತಾ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.
ಹಾಗಾಗಿ ಅಶೋಕ ಗಸ್ತಿ ಅವರ ಪತ್ನಿಗೆ ರಾಜ್ಯಸಭಾ ಸ್ಥಾನ ನೀಡಿ ರಾಜ್ಯದ ಪರಿಶಿಷ್ಟ ಪಂಗಡದ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಅವರು ಒತ್ತಾಯಿಸಿದರು.