ರಾಯಚೂರು: ಇಲ್ಲಿನ ಕಲಾವಿದ ಕುಟುಂಬವೊಂದು ಸಾವಿನಲ್ಲೂ ಮಾನವೀಯತೆ ಮೆರೆದಿದೆ. ನಗರದ ಯರಮರಸ್ ಕ್ಯಾಂಪ್ನ ನಿವಾಸಿ ವಿಜಯಲಕ್ಷ್ಮಿ ಎಂಬುವವರು ಬ್ರೈನ್ ಸ್ಟ್ರೋಕ್ನಿಂದ ಡಿ.18 ರಂದು ಸಾವನ್ನಪ್ಪಿದ್ದರು. ಆದ್ರೆ ವಿಜಯಲಕ್ಷ್ಮಿಯವರ ಇಚ್ಛೆಯಂತೆ ದೇಹವನ್ನು ಮಣ್ಣಿನಲ್ಲಿ ಹೂಳದೇ ನಗರದ ರಿಮ್ಸ್ ಆಸ್ಪತ್ರೆಯ ಅಂಗದಾನ ವಿಭಾಗಕ್ಕೆ ದಾನ ಮಾಡಿ ಸಾರ್ಥಕತೆ ಮರೆದಿದ್ದಾರೆ.
ಸಾವಿನಲ್ಲೂ ಸಾರ್ಥಕತೆ ಮೆರೆದ ರಂಗಕಲಾವಿದ ಕುಟುಂಬ - ದಾಹದಾನ
ವಿಜಯಲಕ್ಷ್ಮಿಯವರ ಇಚ್ಛೆಯಂತೆ ದೇಹವನ್ನು ಮಣ್ಣಿನಲ್ಲಿ ಹೂಳದೇ ನಗರದ ರಿಮ್ಸ್ ಆಸ್ಪತ್ರೆಯ ಅಂಗದಾನ ವಿಭಾಗಕ್ಕೆ ದಾನ ಮಾಡಿ ಸಾರ್ಥಕತೆ ಮರೆದಿದ್ದಾರೆ.

ಕಲಾವಿದೆ ದೇಹದಾನ
ಸಾವಿನಲ್ಲೂ ಸಾರ್ಥಕತೆ ಮೆರೆದ ರಂಗಕಲಾವಿದ ಕುಟುಂಬ
ವಿಜಯಲಕ್ಷ್ಮಿ ಅವರು ರಂಗಕಲಾವಿದೆಯಾಗಿದ್ದರು. ಅವರ ಗಂಡ ಅಲ್ತಾಫ್ ರಂಗಮಿತ್ರ ಕಲಾತಂಡದ ಮೂಲಕ ಪ್ರಸಿದ್ಧಿ ಪಡೆದವರು. ಕಲಾವಿದರಾದ ಇವರಿಬ್ಬರೂ ಪ್ರೀತಿಸಿ ಪ್ರೇಮವಿವಾಹವಾಗಿದ್ದರು. ಧರ್ಮಗಳು ಬೇರೆಯಾದರೂ ಅನ್ಯೂನ್ಯವಾಗಿದ್ದರು. 4 ಮಕ್ಕಳ ತುಂಬು ಸಂಸಾರದ ತಾಯಿಯಾಗಿದ್ದ ವಿಜಯಲಕ್ಷ್ಮಿ ಕೊನೆಯುಸಿರೆಳೆದಾಗ ಸ್ವಇಚ್ಛೆ ಹಾಗೂ ಮಕ್ಕಳ ಒಪ್ಪಿಗೆಯಿಂದ ರಾಯಚೂರು ವೈದ್ಯಕೀಯ ವಿಜ್ಞಾನ ಸಂಶೋಧನಾ ಸಂಸ್ಥೆಯ ಅಂಗದಾನ ವಿಭಾಗಕ್ಕೆ ದೇಹದಾನ ಮಾಡಲಾಗಿದೆ.