ರಾಯಚೂರು: ಲೋಕಸಭಾ ಕ್ಷೇತ್ರದಲ್ಲಿ ಮತದಾನದ ಪ್ರಮಾಣ ಹೆಚ್ಷಿಸಲು ಈಗಾಗಲೇ ಜಿಲ್ಲಾ ಸ್ವೀಪ್ ಸಮಿತಿಯಿಂದ ಅನೇಕ ಮತದಾನದ ಜಾಗೃತಿ ಕಾರ್ಯಕ್ರಮ ನಡೆಸಿದ್ದು ಚುನಾವಣೆ ಸಮೀಪಿಸುತ್ತಿದ್ದಂತೆ ತನ್ನ ಪ್ರಚಾರ ಕಾರ್ಯ ಚುರುಕುಗೊಳಿಸಿದೆ.
ಮತದಾನದ ಜಾಗೃತಿ ಮೂಡಿಸಲು ಗೋಡೆಗಳ ಮೇಲೆ ವರ್ಲೆ ಆರ್ಟ್.
ರಾಯಚೂರು ನಗರದ ಜಿಲ್ಲಾ ಪಂಚಾಯತಿ, ಡಿಸಿ ಕಚೇರಿ, ಕೋರ್ಟ್ ಮತ್ತಿತರೆ ಸರಕಾರಿ ಕಚೇರಿ ಹಾಗೂ ಸಾರ್ವಜನಿಕ ಪ್ರದೇಶದ ಗೋಡೆಗಳಿಗೆ ವರ್ಲೆ ಆರ್ಟ್ ಮೂಲಕ ಮತದಾನದ ಜಾಗೃತಿ ಮೂಡಿಸಲಾಗುತ್ತಿದೆ.
ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಶಾಲಾ ಕಾಲೇಜುಗಳಲ್ಲಿ ರಂಗೋಲಿ, ಪ್ರತಿಜ್ಞಾ ವಿಧಿ ಬೋಧನೆ, ನರೇಗಾ ಕಾರ್ಮಿಕರ ಸ್ಥಳಗಳಲ್ಲಿ ಹೋಗಿ ಅರಿವು ಸೇರಿದಂತೆ ಇತರೆ ಜಾಗೃತಿ ಕಾರ್ಯಕ್ರಮ ನಡೆಸಿದ್ದು ಇಂದು ಕಲಾವಿದರ ಮೂಲಕ ವರ್ಲೆ ಆರ್ಟ್ ಮೂಲಕ ಮತದಾನದ ಕುರಿತು ಇಲ್ಲಿ ಎಲ್ಲರೂ ಸಮಾನರು, ಎಲ್ಲರ ಮತ ಅಮೂಲ್ಯ, ಮತದಾನವೇ ಶಕ್ತಿ ಎಂಬ ಘೋಷ, ಇತರೆ ನುಡಿ ಮುತ್ತುಗಳ ಜೊತೆಗೆ ಚಿತ್ರ ಬಿಡಿಸಿ ಮತದಾರರಿಗೆ ಜಾಗೃತಿ ಮೂಡಿಸಲಾಗುತ್ತಿದೆ.