ಕರ್ನಾಟಕ

karnataka

ETV Bharat / state

ರಾಯಚೂರು: ಹತ್ಯೆ ಮಾಡಿ ಪರಾರಿ ಆಗಿದ್ದ ಆರೋಪಿಯ ಬಂಧನ - arrested murdered accused raichur

ಪೇಂಟಿಂಗ್​ ಕೆಲಸಗಾರ ಅಬ್ದುಲ್ ರಶೀದ್ ಅಲಿಯಾಸ್ ಅಬ್ದುಲ್ ಎಜಾಜ್ ಬಂಧಿತ ಆರೋಪಿ. ನವೆಂಬರ್ 30ರಂದು ಖಾಸಗಿ ಸಹಕಾರಿ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದ ಸೈಯದ್ ಅಹಮದ್ ಖಾದ್ರಿ (38) ಎಂಬುವನನ್ನು ಮಹಿಳಾ ಸಮಾಜ ಮೈದಾನ ಬಳಿಯ ಪಾಳು ಬಿದ್ದ ಕೊಠಡಿಯೊಂದರಲ್ಲಿ ಹತ್ಯೆ ಮಾಡಿ ಪರಾರಿ ಆಗಿದ್ದ.

raichur
ಕೊಲೆ ಮಾಡಿದ ಆರೋಪಿಯ ಬಂಧನ

By

Published : Dec 3, 2020, 7:43 PM IST

ರಾಯಚೂರು: ಮಹಿಳಾ ಸಮಾಜ ಮೈದಾನದ ಬಳಿ ಖಾಸಗಿ ಸಹಕಾರಿ ಬ್ಯಾಂಕ್ ಉದ್ಯೋಗಿಯನ್ನು ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪೇಂಟಿಂಗ್​ ಕೆಲಸಗಾರ ಅಬ್ದುಲ್ ರಶೀದ್ ಅಲಿಯಾಸ್ ಅಬ್ದುಲ್ ಎಜಾಜ್ ಬಂಧಿತ ಆರೋಪಿ. ನವೆಂಬರ್ 30ರಂದು ಖಾಸಗಿ ಸಹಕಾರಿ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದ ಸೈಯದ್ ಅಹಮದ್ ಖಾದ್ರಿ (38) ಎಂಬುವನನ್ನು ಮಹಿಳಾ ಸಮಾಜ ಮೈದಾನ ಬಳಿಯ ಪಾಳು ಬಿದ್ದ ಕೊಠಡಿಯೊಂದರಲ್ಲಿ ಹತ್ಯೆ ಮಾಡಿ ಪರಾರಿ ಆಗಿದ್ದ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆರೋಪಿಯ ಪತ್ತೆಗೆ ವಿಶೇಷ ತನಿಖೆ ತಂಡ ರಚಿಸಿ ಇಂದು ಬಂಧಿಸಿದ್ದಾರೆ. ತನ್ನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರಿಂದ ಆತನನ್ನು ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

ಬೆಳಗಾವಿಯಲ್ಲಿ ರೌಡಿಯ ಬರ್ಬರ ಹತ್ಯೆ; ಸುಪಾರಿ ಕೊಟ್ಟವ ಅರೆಸ್ಟ್!

ಆರೋಪಿಯನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರಿಪಡಿಸಿದ್ದಾರೆ.

ABOUT THE AUTHOR

...view details