ಕರ್ನಾಟಕ

karnataka

ETV Bharat / state

ರಾಯಚೂರು: ಕೊರೊನಾ ಸೋಂಕಿತ ಗರ್ಭಿಣಿಯರ ಹೆರಿಗೆಗಾಗಿ ಪತ್ಯೇಕ ವ್ಯವಸ್ಥೆ

ರಾಯಚೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸಿ, ತಾಯಿ-ಮಗುವನ್ನ ಸುರಕ್ಷಿತವಾಗಿ ಆರೈಕೆ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 8 ಜನ ಕೊರೊನಾ ಸೋಂಕಿತರಿಗೆ ಹೆರಿಗೆ ಮಾಡಿಸಲಾಗಿದ್ದು, ತಾಯಿ, ಮಗು ಸುರಕ್ಷಿತಾವಾಗಿದ್ದಾರೆ.

By

Published : Oct 1, 2020, 9:10 AM IST

raichur
raichur

ರಾಯಚೂರು:ಮಹಾಮಾರಿ ಕೊರೊನಾ ವೈರಸ್ ಸಾರ್ವಜನಿಕರ ನೆಮ್ಮದಿಯನ್ನ ಭಂಗ ಮಾಡಿದೆ. ಗರ್ಭಿಣಿರಿಯರಿಗೂ ಸೋಂಕು ಹರಡುವ ಮೂಲಕ ಗರ್ಭೀಣಿಯರಿಗೂ ಭಯ ಹುಟ್ಟಿಸಿತ್ತು.

ರಾಯಚೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸಿ, ತಾಯಿ-ಮಗುವನ್ನ ಸುರಕ್ಷಿತಾವಾಗಿ ಆರೈಕೆ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಕೊರೊನಾ ಸೋಂಕಿತ ಗರ್ಭಿಣಿಯರ ಹೆರಿಗೆಗೆ ಪತ್ಯೇಕ ವ್ಯವಸ್ಥೆ

ರಾಜ್ಯದಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದ ಆರಂಭದ ದಿನಗಳಲ್ಲಿ ರಾಯಚೂರು ಜಿಲ್ಲೆ ಗ್ರೀನ್ ವಲಯದಲ್ಲಿ ಗುರುತಿಸಿಕೊಂಡಿತ್ತು. ಇದಾದ ಬಳಿಕ ಕೂಲಿ ಕೆಲಸಕ್ಕೆ ವಲಸೆ ಹೋಗಿದ್ದ ಕಾರ್ಮಿಕರು ವಾಪಸ್ ಜಿಲ್ಲೆಗೆ ಬರುವುದಕ್ಕೆ ಅನುಮತಿ ನೀಡಲಾಯಿತು.

ಅಲ್ಲಿಂದ ಜಿಲ್ಲೆಗೆ ಕೊರೊನಾ ಸೋಂಕು ಹರಡುವುದಕ್ಕೆ ಶುರುವಾಗಿದೆ. ದಿನ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಈ ನಡುವೆ ಗರ್ಭಿಣಿಯರಿಗೆ ಕೊರೊನಾ ಸೋಂಕು ಹರಡಿದೆ. ಜಿಲ್ಲೆಯಲ್ಲಿ ಇದುವರೆಗೆ 8 ಜನ ಕೊರೊನಾ ಸೋಂಕಿತರಿಗೆ ಹೆರಿಗೆ ಮಾಡಿಸಲಾಗಿದ್ದು, ತಾಯಿ, ಮಗು ಸುರಕ್ಷಿತಾವಾಗಿದ್ದಾರೆ.

ಜಿಲ್ಲೆಯ ಗರ್ಭಿಣಿಯರಿಗೆ ಸೋಂಕು ದೃಢಪಟ್ಟಿದ್ದರೆ, ಅವರನ್ನು ಪ್ರತ್ಯೇಕವಾಗಿ ಕ್ವಾರಂಟೈನ್ ಮಾಡಿ, ಆರೋಗ್ಯ ತಪಾಸಣೆ ಮಾಡುವ ಮೂಲಕ ಆರೈಕೆ ಮಾಡಲಾಗುತ್ತದೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡಿದಾಗಿನಿಂದ ಇಲ್ಲಿಯವರೆಗೆ 8 ಗರ್ಭಿಣಿಯರಿಗೆ ಹೆರಿಗೆ ಮಾಡಿಸಲಾಗಿದೆ. ಸೋಂಕಿತ ಗರ್ಭಿಣಿಯರ ಹೆರಿಗಾಗಿಯೇ ನಗರದ ಓಪೆಕ್ ಕೋವಿಡ್ ಆಸ್ಪತ್ರೆಯಲ್ಲಿ ಪತ್ಯೇಕವಾದ ಕೊಠಡಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಲ್ಲದೆ ಶಸ್ತ್ರಚಿಕಿತ್ಸೆಗೂ ಪತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕಾಗಿ ಅವಶ್ಯಕತೆಯಿರುವಷ್ಟು ಸಿಬ್ಬಂದಿ, ವೈದ್ಯರನ್ನು ನಿಯೋಜಿಸಲಾಗುತ್ತಿದೆ.

ನಾರ್ಮಲ್ ಹೆರಿಗೆ ಆದವರನ್ನ 48 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಇರಿಸಿಕೊಂಡು, ಬಳಿಕ 10 ದಿನ ಕ್ವಾರಂಟೈನ್​ನಲ್ಲಿ ಇರಿಸಿ, ಮನೆಗೆ ಕಳುಹಿಸಲಾಗುತ್ತದೆ. ಸಿಜೇರಿಯನ್ ಹೆರಿಗೆಯಾದ ಗರ್ಭಿಣಿಯರಿಗೆ ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, 10 ದಿನ ಕ್ವಾರಂಟೈನ್​ನಲ್ಲಿ ಇರಿಸಿ, ಡಿಸ್ಚಾರ್ಜ್ ಮಾಡಲಾಗುತ್ತಿದೆ.

ಮಗುವಿಗೆ ತಾಯಿ ಹಾಲು ನೀಡುವುದಕ್ಕೂ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈವರೆಗೆ ಆಗಿರುವ 8 ಹೆರಿಗೆಗಗಳಲ್ಲಿ ತಾಯಿ, ಮಗು ಆರೋಗ್ಯವಾಗಿದ್ದು, ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಲಾಗಿದೆ.

ABOUT THE AUTHOR

...view details