ಕರ್ನಾಟಕ

karnataka

ಮಂತ್ರಾಲಯ ಗುರು ರಾಯರ 350ನೇ ಆರಾಧನಾ ಮಹೋತ್ಸವಕ್ಕೆ ಚಾಲನೆ

By

Published : Aug 21, 2021, 9:42 PM IST

ಇಂದಿನಿಂದ ಏಳು ದಿನಗಳ ಕಾಲ ಆರಾಧನಾ ಮಹೋತ್ಸವವಿದೆ. ಆಗಸ್ಟ್​ 23ರಂದು ಪೂರ್ವಾರಾಧನೆ, 24 ಮಧ್ಯಾರಾಧನೆ, 25ರಂದು ಉತ್ತಾರಾಧನೆ ಕಾರ್ಯಕ್ರಮಗಳು ನಡೆಯಲಿವೆ. ಮಹೋತ್ಸವಕ್ಕೆ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದಾರೆ..

aradhana-mahotsava-in-mantralaya
ಮಂತ್ರಾಲಯ ಗುರು ರಾಯರ 350ನೇ ಆರಾಧನಾ ಮಹೋತ್ಸವಕ್ಕೆ ಚಾಲನೆ

ರಾಯಚೂರು :ಕಲಿಯುಗದ ಕಾಮಧೇನು, ಭಕ್ತರ ಕಲ್ಪವೃಕ್ಷ ಮಂತ್ರಾಲಯದ ಗುರು ಶ್ರೀರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವಕ್ಕೆ ಚಾಲನೆ ದೊರಕಿದೆ. ಶ್ರೀಮಠದ‌ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ಧ್ವಜಾರೋಹಣ ನೆರವೇರಿಸಿ, ಆರಾಧನಾ ಮಹೋತ್ಸವಕ್ಕೆ ಚಾಲನೆ ನೀಡಿದರು.

ಶ್ರೀ ಸುಬುಧೇಂದ್ರ ತೀರ್ಥರಿಂದ ಧ್ವಜಾರೋಹಣ

ಧ್ವಜಾರೋಹಣಕ್ಕೂ ಮುನ್ನ ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನ ದರ್ಶನ ಪಡೆದ ಬಳಿಕ ಗೋವು, ಅಶ್ವಪೂಜೆ, ಗಜಪೂಜೆ ಹಾಗೂ ಧಾರ್ಮಿಕ‌ ವಿಧಿ-ವಿಧಾನಗಳನ್ನ ನೆರವೇರಿಸಿದರು. ಭಕ್ತರ ಮೇಲೆ ಪುಷ್ಪ ಹಾಕುವ ಮೂಲಕ‌ ಆಶೀರ್ವದಿಸಿದರು.

ಆರಾಧನಾ ಮಹೋತ್ಸವ

ಮಂತ್ರಾಲಯ ಝಗಮಗ :ಆರಾಧನಾ ಮಹೋತ್ಸವ ಹಿನ್ನೆಲೆ ಶ್ರೀಮಠವು ಹೂವಿನ ಅಲಂಕಾರ, ಆಕರ್ಷಕ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಕೋವಿಡ್ ಹಿನ್ನೆಲೆ ಅಗತ್ಯ ಕ್ರಮ ಕೈಗೊಂಡಿದ್ದು, ಭಕ್ತರು ನಿಯಮ ಪಾಲನೆ ಮಾಡುವಂತೆ ಸೂಚಿಸಲಾಗಿದೆ.

ಇಂದಿನಿಂದ ಏಳು ದಿನಗಳ ಕಾಲ ಆರಾಧನಾ ಮಹೋತ್ಸವವಿದೆ. ಆಗಸ್ಟ್​ 23ರಂದು ಪೂರ್ವಾರಾಧನೆ, 24 ಮಧ್ಯಾರಾಧನೆ, 25ರಂದು ಉತ್ತಾರಾಧನೆ ಕಾರ್ಯಕ್ರಮಗಳು ನಡೆಯಲಿವೆ. ಮಹೋತ್ಸವಕ್ಕೆ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದಾರೆ.

ಇದನ್ನೂ ಓದಿ:ರಕ್ಷಾ ಬಂಧನ: ಇಲ್ಲಿ ಒಂದು ರಾಖಿಯ ಬೆಲೆ 2 ಲಕ್ಷ ರೂಪಾಯಿ

ABOUT THE AUTHOR

...view details