ಕರ್ನಾಟಕ

karnataka

ETV Bharat / state

ಎಪಿಎಲ್​ ಕಾರ್ಡ್​ ಬಿಪಿಎಲ್​ಗೆ ಬದಲಾವಣೆ: ಇಬ್ಬರ ಬಂಧನ - ಎಪಿಎಲ್​ ಕಾರ್ಡ್​ನ್ನು ಬಿಪಿಎಲ್​ಗೆ ಬದಲಾವಣೆ

ಎಪಿಎಲ್ ಕಾರ್ಡ್​ನ್ನು ಬಿಪಿಎಲ್ ಕಾರ್ಡ್ ಆಗಿ ಬದಲಾಯಿಸಿದ ಇಬ್ಬರು ಆರೋಪಿಗಳನ್ನು ಸಿಂಧನೂರು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಂಪ್ಯೂಟರ್ ಆಪರೇಟರ್ ಬಸವರಾಜ್​ ಹಾಗೂ ಕಾರ್ಡ್ ಹೊಂದಿದ್ದ ಮಹಿಳೆಯ ಪತಿ ಬಸಪ್ಪ ಬಂಧಿತ ಆರೋಪಿಗಳು.

Two accused Arrested in Raichur
ಬಂಧಿತ ಆರೋಪಿಗಳು

By

Published : Feb 20, 2021, 5:49 PM IST

ರಾಯಚೂರು: ಎಪಿಎಲ್ ಕಾರ್ಡ್​ ಬಿಪಿಎಲ್ ಕಾರ್ಡ್ ಆಗಿ ಬದಲಾಯಿಸಿದ ಇಬ್ಬರು ಆರೋಪಿಗಳನ್ನು ಸಿಂಧನೂರು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಂಪ್ಯೂಟರ್ ಆಪರೇಟರ್ ಬಸವರಾಜ್​ ಹಾಗೂ ಕಾರ್ಡ್ ಹೊಂದಿದ್ದ ಮಹಿಳೆಯ ಪತಿ ಬಸಪ್ಪ ಬಂಧಿತ ಆರೋಪಿಗಳು. ಬಾದರ್ಲಿ ಗ್ರಾಮದ ಹುಲಿಗೆಮ್ಮ ಅವರು ಎಪಿಎಲ್ ಕಾರ್ಡ್ ಹೊಂದಿದ್ದರು. ಇದನ್ನ ಕಂಪ್ಯೂಟರ್ ಆಪರೇಟರ್ ಬಸವರಾಜ ಎಪಿಎಲ್​ನಿಂದ ಬಿಪಿಎಲ್ ಕಾರ್ಡ್ ಆಗಿ ಬದಲಾಯಿಸಿದ್ದರು. ಇದನ್ನ ಗಮನಕ್ಕೆ ಪಡೆದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ನಿರೀಕ್ಷಕರು ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಸಿಂಧನೂರು ನಗರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಾರ್ಡ್ ಬದಲಿಸಿಕೊಂಡ ಫಲಾನುಭವಿ ಹುಲಿಗೆಮ್ಮ ಮತ್ತು ಈಕೆಯ ಪತಿ ಬಸಪ್ಪ ವಿರುದ್ದ ದೂರು ದಾಖಲಿಸಿಕೊಳ್ಳಲಾಗಿದೆ. ಎಪಿಎಲ್ ಕಾರ್ಡ್ ಲಾಗಿನ್fcjsditನಿಂದ ಬಿಪಿಎಲ್ ಕಾರ್ಡ್ ಆಗಿ ಮಾರ್ಪಡು ಮಾಡಿದ್ದು, ಈ ಬಗ್ಗೆ ತನಿಖೆ ಮುಂದುವರೆದಿದೆ.

ABOUT THE AUTHOR

...view details