ಕರ್ನಾಟಕ

karnataka

ETV Bharat / state

ಹಣ ಪಡೆದು ಪರಾರಿಯಾಗಿದ್ದಾರೆಂಬ ಆರೋಪ....ಪತಿಯೊಂದಿಗೆ ನಟಿ ಪ್ರತ್ಯಕ್ಷ! - raichur latest news

ನಿರ್ಮಾಪಕರ ಬಳಿ ಹಣ ಪಡೆದುಕೊಂಡು ನಟಿ ವಿಜಯಲಕ್ಷ್ಮಿ ಪರಾರಿಯಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಆದ್ರೆ ನಟಿ ತನ್ನ ಪತಿಯೊಂದಿಗೆ ಪ್ರತ್ಯಕ್ಷವಾಗಿದ್ದು, ಇವೆಲ್ಲ ಸುಳ್ಳು ಆರೋಪ ಎಂದು ಸ್ಪಷ್ಟನೆ ನೀಡಿದ್ದಾರೆ.

Another twist to the accusation that actress Vijayalakshmi has escaped with the money
ಹಣ ಪಡೆದು ನಟಿ ವಿಜಯಲಕ್ಷ್ಮಿ ಪರಾರಿಯಾಗಿದ್ದಾರೆಂಬ ಆರೋಪ....ನಟಿ ತನ್ನ ಪತಿಯೊಂದಿಗೆ ಪ್ರತ್ಯಕ್ಷ!

By

Published : Jan 9, 2020, 10:58 AM IST

Updated : Jan 9, 2020, 12:14 PM IST

ರಾಯಚೂರು: ನಿರ್ಮಾಪಕರೊಂದಿಗೆ ಹಣ ಪಡೆದುಕೊಂಡು ನಟಿ ವಿಜಯಲಕ್ಷ್ಮಿ ಪರಾರಿಯಾಗಿದ್ದಾರೆ ಎನ್ನುವ ಆರೋಪದ ಬೆನ್ನಲ್ಲೇ, ಜಿಲ್ಲೆಯಲ್ಲಿ ಪತಿ ಜತೆಗೆ ಪ್ರತ್ಯಕ್ಷವಾಗಿದ್ದಾರೆ.

ನಿರ್ಮಾಪಕರ ಬಳಿ ಹಣ ಪಡೆದುಕೊಂಡು ನಟಿ ವಿಜಯಲಕ್ಷ್ಮಿ ಪರಾರಿಯಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಆದ್ರೆ ಆರೋಪವನ್ನ ನಟಿ ವಿಜಯಲಕ್ಷ್ಮಿ ತಳಿ ಹಾಕಿದ್ದಾರೆ. ನಾನು ಯಾವ ನಿರ್ಮಾಪಕರ ಬಳಿ ಹಣ ಪಡೆದಿಲ್ಲ. ನಿರ್ದೇಶಕ ಆಂಜನಪ್ಪರನ್ನು ಪ್ರಿತಿಸಿ ಮದುವೆ ಆಗಿದ್ದೇನೆ. ತುಂಗಭದ್ರಾ ಸಿನಿಮಾದಲ್ಲಿ ನಟಿಸುವಾಗ ಇಬ್ಬರ ನಡುವೆ ಪ್ರೇಮವಾಗಿ ಇಬ್ಬರೂ ಪರಸ್ಪರ ಒಪ್ಪಿಕೊಂಡು ಮದುವೆ ಆಗಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಹಣ ಪಡೆದು ಪರಾರಿಯಾಗಿದ್ದಾರೆಂಬ ಆರೋಪ....ಪತಿಯೊಂದಿಗೆ ನಟಿ ಪ್ರತ್ಯಕ್ಷ!

ನಾನು ಪ್ರೀತಿಸಿ ಮದುವೆಯಾಗಿದ್ದೇನೆ. ನಮ್ಮ ಅಜ್ಜಿ ಸಾವನ್ನಪ್ಪಿಲ್ಲ, ನಮ್ಮ ತಾಯಿ ನಾಟಕ ಮಾಡುತ್ತಿದ್ದಾರೆ‌. ನನ್ನ ತಾಯಿ ಸವಿತಾ ಮೊದಲು ಹೀಗೆ ವಿಷ ಸೇವಿಸಿ ನಾಟಕ ಮಾಡಿದ್ರು. ಈಗಲೂ‌‌ ಕೂಡ ನಾನು ಮದುವೆ ಆಗಿರುವುದು ಇಷ್ಟವಿಲ್ಲ, ಹೀಗಾಗಿ ಹೀಗೆ ನಾಟಕ ಮಾಡುತ್ತಿದ್ದಾರೆ. ನನ್ನ ತಂದೆಯಿಂದ, ನನ್ನ ತಾಯಿ ಬಿಟ್ಟು 6 ವರ್ಷಗಳು ಕಳೆದಿವೆ. ನಾವು ಬರುವಾಗ ಯಾರ ಬಳಿಯೂ ಹಣ ಆಗಲಿ, ಚಿನ್ನವಾಗಲಿ, ಒಡವೆಯಾಗಲಿ ತಂದಿಲ್ಲ, ನಮ್ಮ ಮೇಲೆ ಸಾಕು ತಂದೆ ಮಾಡುತ್ತಿರುವ ಎಲ್ಲ ಆರೋಪವೂ ಸುಳ್ಳು ಎಂದು ಹೇಳಿದರು.

ಅಜ್ಜಿ ಮೃತಪಟ್ಟಿದ್ದಾರೆ, ಅಮ್ಮ ಹಾಸಿಗೆ ಹಿಡಿದಿದ್ದಾರೆ: ಮಗಳು ನಿರ್ದೇಶಕನ ಜೊತೆ ಸೆಟ್‌ನಿಂದಲೇ ಪರಾರಿ!

ನನ್ನ ಪೋಷಕರಿಗೆ ಕೇವಲ ಹಣ ಬೇಕು. ನಾನು ಮನೆಗೆ ಹೋಗಲಿಲ್ಲ, ನಾನು ಪ್ರೀತಿ ‌ಮಾಡಿ ಮದುವೆ ಆಗಿದ್ದೇನೆ. ನನ್ನ ಗಂಡನ ಮನೆಗೂ ಬಂದು ನಮಗೆ ಕಿರುಕುಳ ‌ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಅವರು ರಾಯಚೂರು ಎಸ್ ಪಿ ಡಾ. ಸಿ.ಬಿ.ವೇದಮೂರ್ತಿಯವರನ್ನ ಭೇಟಿ ಮಾಡಿ ರಕ್ಷಣೆಗಾಗಿ ಮನವಿ‌ ಮಾಡಿದ್ದೇವೆ ಎಂದು ಹೇಳಿದ್ದಾರೆ. ಇದೇ ವೇಳೆ, ನಮಗೆ ಬದುಕಲು ಬಿಡಿ , ನಾವು ಮುಂದಿನ‌ ದಿನಗಳಲ್ಲಿ ಸಿನಿಮಾ ಮಾಡುತ್ತೇವೆ ಅಂತಾ ನಟಿ ವಿಜಯಲಕ್ಷ್ಮಿ ಮನವಿ ಕೂಡಾ ಮಾಡಿದ್ದಾರೆ.

Last Updated : Jan 9, 2020, 12:14 PM IST

ABOUT THE AUTHOR

...view details