ರಾಯಚೂರು :ಜಿಲ್ಲಾ ಪಂಚಾಯತ್ 2020-2021ನೇ ಸಾಲಿನ ಮನ್ರೇಗಾ ಯೋಜನೆಯಡಿ ಜಿಲ್ಲೆಯ ಒಟ್ಟು 237 ಕಟ್ಟಡಗಳನ್ನ ಸುಮಾರು 10 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ನಿರ್ಮಿಸುವ ಗುರಿ ಹೊಂದಲಾಗಿದೆ.
ಬಣ್ಣ-ಬಣ್ಣದ ಚಿತ್ತಾರಗಳಿಂದ ನಿರ್ಮಾಣವಾದ ಅಂಗನವಾಡಿ ಕೇಂದ್ರಗಳು - Raichur news
ಜಿಲ್ಲೆ ಶೈಕ್ಷಣಿಕವಾಗಿ ಹಿಂದುಳಿದೆ. ಮಕ್ಕಳ ಕಲಿಕೆಗೆ ಮೂಲಸೌಲಭ್ಯಗಳ ಕೊರತೆಯಿದೆ ಎನ್ನುವ ಆರೋಪವಿದೆ. ಅದರಲ್ಲೂ ಅಂಗನವಾಡಿ ಕೇಂದ್ರಗಳಲ್ಲಿ ಕಟ್ಟಡದ ಕೊರತೆ ಜಿಲ್ಲೆಯಲ್ಲಿ ಎದ್ದು ಕಾಣುತ್ತದೆ. ಅದನ್ನ ನೀಗಿಸಲು ಜಿಪಂ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಸುಸಜ್ಜಿತ ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೆತ್ತಿಗೊಂಡಿದೆ..

ಇದರಲ್ಲಿ ದೇವದುರ್ಗದ 37, ಲಿಂಗಸೂಗೂರು 39, ಮಾನವಿ 31, ಮಸ್ಕಿ 25, ರಾಯಚೂರು 45, ಸಿಂಧನೂರು 42, ಸಿರವಾರ 18 ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಾಣದ ಗುರಿ ಹೊಂದಿದೆ. ಈಗಾಗಲೇ 237 ಕಟ್ಟಡಗಳ ಪೈಕಿ 173 ಕಾಮಗಾರಿಗಳ ಕಟ್ಟಡವಾಗಿದ್ದು, 14 ಕಟ್ಟಡ ನಿರ್ಮಾಣ ಪೂರ್ಣಗೊಂಡಿದೆ.
ಈ ಅಂಗನವಾಡಿ ಕೇಂದ್ರಗಳನ್ನ ಕೇವಲ ಕಟ್ಟಡವೆಂಬಂತೆ ನಿರ್ಮಿಸದೆ ಮಕ್ಕಳನ್ನ ಆಕರ್ಷಿಸುವ ಸಲುವಾಗಿ ಸ್ಥಳೀಯ ಕಲಾವಿದರಿಂದಲೇ ಸುಣ್ಣ-ಬಣ್ಣ ಬಳಿದು, ಮಕ್ಕಳ ಕಲಿಕೆಗೆ ಪೂರಕವಾಗುವ ಕನ್ನಡ, ಇಂಗ್ಲಿಷ್ ಅಕ್ಷರಗಳು, ಸಂಖ್ಯೆಗಳು, ಕಾರ್ಟೂನ್ಗಳು, ಹಣ್ಣುಗಳ ಚಿತ್ರ, ಪಕ್ಷಿಗಳು, ಮಕ್ಕಳ ಚಿತ್ರಗಳು, ತರಕಾರಿಗಳು, ಬಸ್, ವಿಮಾನ, ಹಡಗು, ಎತ್ತು, ಆಕಳು ಚಿತ್ರಗಳನ್ನ ಕಟ್ಟಡದ ಒಳಗೆ ಹಾಗೂ ಹೊರಗೆ ಬಿಡಿಸಲಾಗಿದೆ.