ರಾಯಚೂರು: ಬೈಕ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಯುವಕ ಮೃತಪಟ್ಟಿರುವ ಘಟನೆ ರಾಯಚೂರಿನ ಮಂಜರ್ಲಾ ಕ್ರಾಸ್ ಬಳಿ ನಡೆದಿದೆ. ಘಟನೆಯಲ್ಲಿ ನೇತಾಜಿ ನಗರದ ನಿವಾಸಿ ಮುಜುಬುಲ್(18) ಮೃತಪಟ್ಟಿದ್ದಾರೆ.
ಇನ್ನೋರ್ವ ಯುವಕ ಎಲ್‌ಬಿಎಸ್ ನಗರದ ರಿಜ್ವಾನ್ ಗಾಯಗೊಂಡಿದ್ದಾನೆ. ಭಾನುವಾರ ಸಂಜೆ ಯರಗೇರಾಯಿಂದ ರಾಯಚೂರು ಕಡೆಗೆ ಬೈಕ್, ರಾಯಚೂರು ಕಡೆಯಿಂದ ಯರಗೇರಾ ಕಡೆ ಕಾರ್ ತೆರಳುವಾಗ, ಮಾರ್ಗಮಧ್ಯ ಎರಡು ಡಿಕ್ಕಿ ಹೊಡೆದಿವೆ. ಪರಿಣಾಮ ಇಬ್ಬರು ಯುವಕರು ಗಾಯಗೊಂಡಿದ್ದಾರೆ.