ರಾಯಚೂರು: ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ತಾಲೂಕಿನಲ್ಲಿ ನಡೆದಿದೆ. ಮೃತರನ್ನು ಇಲ್ಲಿನ ಸಿಂಗನೋಡಿ ಗ್ರಾಮದ ಸರಸ್ವತಿ(21), ಮಂಡಲಗೇರಾ ಗ್ರಾಮದ ವಿನೋದ(24) ಎಂದು ಗುರುತಿಸಲಾಗಿದೆ.
ಮೃತ ಸರಸ್ವತಿ ಮತ್ತು ವಿನೋದ್ಗೆ ಮನೆಯವರೆಲ್ಲ ಸೇರಿ ನಿಶ್ಚಿತಾರ್ಥ ಮಾಡಿದ್ದರು. ಬಳಿಕ ಮೊಬೈಲ್ನಲ್ಲಿ ಮಾತನಾಡುವ ವೇಳೆ ಮಾತಿಗೆ ಮಾತು ಬೆಳೆದು, ಜಗಳವಾಡಿ ಮನನೊಂದು ಮೊದಲು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಬಳಿಕ ಈ ಸುದ್ದಿ ತಿಳಿದ ಯುವಕ ಸಹ ಮನನೊಂದು ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ.