ಕರ್ನಾಟಕ

karnataka

ETV Bharat / state

ಅಕ್ರಮ ಮರಳು ಸಾಗಣೆ ವಿರುದ್ಧ ಧ್ವನಿ ಎತ್ತಿದವರ ಮೇಲೆ ಹಲ್ಲೆ: ವಿಡಿಯೋ ವೈರಲ್ - undefined

ರಾಯಚೂರು ಜಿಲ್ಲೆಯಲ್ಲಿ  ಕೃಷ್ಣ ಮತ್ತು ತುಂಗಭದ್ರಾ  ನದಿ ಬಳಿ  ಕೆಲ ರಾಜಕಾರಣಿಗಳು ಅಕ್ರಮ ಮರಳು  ದಂಧೆಗೆ ಮುಂದಾಗಿದ್ದು, ಪ್ರಶ್ನಿಸಿದ  ಸಾಮಾಜಿಕ ಕಾರ್ಯಕರ್ತ‌ ಹನುಮಂತ ಭಂಗಿ ಅವರ ಮೇಲೆ ಕೊಲೆ ಬೆದರಿಕೆ ಹಾಕಿದ್ದಾರೆ, ಅಲ್ಲದೇ ಮಾರಣಾಂತಿಕ ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ಫುಲ್ ವೈರಲ್ ಅಗಿದೆ.

ಸಾಮಾಜಿಕ  ಕಾರ್ಯಕರ್ತನ ಮೇಲೆ ಹಲ್ಲೆ

By

Published : Jul 11, 2019, 2:18 PM IST

ರಾಯಚೂರು:ಅಕ್ರಮ ಮರಳು ದಂಧೆಗೆ ಮುಂದಾದವರ ವಿರುದ್ಧ ಧ್ವನಿ ಎತ್ತಿದವನಿಗೆ ಕೊಲೆ ಬೆದರಿಕೆ ಹಾಕಿದ್ದಲ್ಲದೇ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ಫುಲ್ ವೈರಲ್ ಅಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ಅಕ್ರಮ ಮರಳು ಸಾಗಣೆ ವಿರುದ್ಧ ಧ್ವನಿ ಎತ್ತಿದ ಸಾಮಾಜಿಕ ಕಾರ್ಯಕರ್ತನ ಮೇಲೆ ಹಲ್ಲೆ: ವಿಡಿಯೋ ವೈರಲ್

ಜಿಲ್ಲೆಯಲ್ಲಿ ಕೃಷ್ಣ ಮತ್ತು ತುಂಗಭದ್ರಾ ನದಿಗಳನ್ನೇ ಬಂಡವಾಳ ಮಾಡಿಕೊಂಡ ಕೆಲ ರಾಜಕಾರಣಿಗಳ ಸಂಬಂಧಿಕರು ಹಾಗೂ ದಂಧೆಕೋರರು ಅಕ್ರಮ ಮರಳುದಂಧೆಗೆ ಮುಂದಾಗಿದ್ದಾರೆ. ಇದರ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಸಾಮಾಜಿಕ ಕಾರ್ಯಕರ್ತ‌ ಹನುಮಂತ ಭಂಗಿ ಅವರ ಮೇಲೆ ಕೊಲೆ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಮಾರಣಾಂತಿಕ ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ಫುಲ್ ವೈರಲ್ ಅಗಿದೆ.

ಕೆಲವು ವರ್ಷಗಳಿಂದ ಈ ಎರಡೂ ನದಿಯಲ್ಲಿ ಮರಳುಗಾರಿಕೆ ದಂಧೆ ಜೋರಾಗಿ ನಡೆಯುತ್ತಿದೆ. ಈ ಮರಳುಗಾರಿಕೆಯಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೇ ಪ್ರಮುಖ ಪಾತ್ರ ವಹಿಸಿದ್ದಾರೆ . ಈ ದಂಧೆ ಬಗ್ಗೆ ಸಾಮಾಜಿಕ ಕಾರ್ಯಕರ್ತ ಹನುಮಂತ ಭಂಗಿ ದೇವದುರ್ಗ ತಾಲೂಕಿನ ಬಾಗೂರು ಗ್ರಾಮ ಬಳಿಯ ಕೃಷ್ಣಾ ನದಿ ಬಳಿ ಫೋಟೋ ತೆಗೆಯಲು ಹೋದಾಗ ಮಾಜಿ ಸಂಸದ ಬಿ.ವಿ.ನಾಯಕ ಅಳಿಯ ಶ್ರೀನಿವಾಸ್ ನಾಯಕ, ಅಶೋಕ, ರವಿ ಸೇರಿದಂತೆ ಇತರ ಗುತ್ತಿಗೆದಾರರು ಸೇರಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಕಾರ್ಯಕರ್ತರು ದೂರು ದಾಖಲಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details