ಕರ್ನಾಟಕ

karnataka

ETV Bharat / state

ಲಿಂಗಸುಗೂರು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರ ಮಧ್ಯೆ ವಾಗ್ವಾದ - Lingasaguru municipality

ಶಾಲಾ ಮಕ್ಕಳ ವೀಕ್ಷಣೆ ಬಗ್ಗೆ ಕೆಲ ಸದಸ್ಯರು ಪ್ರಶ್ನೆ ಮಾಡುತ್ತಿದ್ದಂತೆ ಅಧ್ಯಕ್ಷರು, ಮುಖ್ಯಾಧಿಕಾರಿಗಳು ತಮಗೆ ಮಾಹಿತಿ ಇಲ್ಲ ಎಂದ ತಕ್ಷಣ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ವಾಗ್ವಾದ ನಡೆಯಿತು.

ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರ ಮಧ್ಯೆ ವಾಗ್ವಾದ
ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರ ಮಧ್ಯೆ ವಾಗ್ವಾದ

By

Published : Jan 20, 2021, 4:58 PM IST

ಲಿಂಗಸುಗೂರು (ರಾಯಚೂರು): ಪುರಸಭೆಯ ಸಾಮಾನ್ಯ ಸಭೆಯಲ್ಲಿ ಶಾಲಾ ವಿದ್ಯಾರ್ಥಿಗಳ ಪ್ರವೇಶ, ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ಸಂಬಂಧಿಸಿದಂತೆ ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು.

ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರ ಮಧ್ಯೆ ವಾಗ್ವಾದ

ಶಾಲಾ ಮಕ್ಕಳ ವೀಕ್ಷಣೆ ಬಗ್ಗೆ ಕೆಲ ಸದಸ್ಯರು ಪ್ರಶ್ನೆ ಮಾಡುತ್ತಿದ್ದಂತೆ ಅಧ್ಯಕ್ಷರು, ಮುಖ್ಯಾಧಿಕಾರಿಗಳು ತಮಗೆ ಮಾಹಿತಿ ಇಲ್ಲ ಎಂದ ತಕ್ಷಣ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ವಾಗ್ವಾದ ನಡೆಯಿತು.

ಓದಿ:ಈಟಿವಿ ಭಾರತ ಫಲಶೃತಿ: ಸಿಂಧನೂರು - ಹಂಚಿನಾಳ ಗ್ರಾಮಕ್ಕೆ ಬಸ್​ ವ್ಯವಸ್ಥೆ

ಸ್ಥಾಯಿ ಸಮಿತಿ ರಚನೆ ಕುರಿತು ಆರಂಭದಲ್ಲಿಯೇ ಅಧ್ಯಕ್ಷರು ನಮ್ಮ ಗಮನಕ್ಕೆ ತರದೆ ಸಹಿ ಪಡೆದಿದ್ದಾರೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಅಧ್ಯಕ್ಷೆ ಗದ್ದೆಮ್ಮ, ಉಪಾಧ್ಯಕ್ಷ ಎಂ.ಡಿ.ರಫಿ ಮಧ್ಯೆ ಹೊಂದಾಣಿಕೆ ಇಲ್ಲದಿರುವುದು ಬಹಿರಂಗಗೊಂಡಿತು. ಸುದೀರ್ಘ ವಾಗ್ವಾದದ ನಂತರ ಅಧ್ಯಕ್ಷೆ, ಉಪಾಧ್ಯಕ್ಷರು ಗುಪ್ತ ಸಭೆ ನಡೆಸಿ ಸ್ಥಾಯಿ ಸಮಿತಿ ರಚನೆಗೆ ಅಂತ್ಯ ಹಾಡಿದರು. ನಂತರದಲ್ಲಿ ಸಬೆಯಲ್ಲಿ 30 ಅಂಶಗಳ ಕುರಿತು ಚರ್ಚೆ ನಡೆಯಿತು.

ABOUT THE AUTHOR

...view details