ಕರ್ನಾಟಕ

karnataka

ETV Bharat / state

₹41 ಸಾವಿರ, ಮೊಬೈಲ್​ ಹಿಂದುರುಗಿಸಿ ಪ್ರಾಮಾಣಿಕತೆ ಮೆರೆದ 108 ಸಿಬ್ಬಂದಿ - Ambulance staff returned mobile and money news

ಗಾಯಗೊಂಡ ಬೈಕ್ ಸವಾರನನ್ನು ಆಸ್ಪತ್ರಗೆ ದಾಖಲಿಸಿ, ಆತನ ಬಳಿಯಿಂದ ದೊರೆತಿದ್ದ ಹಣ ಹಾಗೂ ಮೊಬೈಲ್ ಅನ್ನು ಹಿಂದುರುಗಿಸುವ ಮೂಲಕ 108 ಆರೋಗ್ಯ ಕವಚ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ.

Ambulance staff returned mobile and money
ಮೊಬೈಲ್​ ಹಿಂದುರುಗಿಸಿ ಪ್ರಾಮಾಣಿಕತೆ ಮೆರೆದ 108 ಸಿಬ್ಬಂದಿ

By

Published : Jun 11, 2021, 4:21 PM IST

ರಾಯಚೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಗಾಯಾಳುವಿನ ಹಣ ಹಾಗೂ ಮೊಬೈಲ್ ಅನ್ನು ಹಿಂದುರುಗಿಸುವ ಮೂಲಕ 108 ಆರೋಗ್ಯ ಕವಚ ಸಿಬ್ಬಂದಿ ಪ್ರಮಾಣಿಕತೆ ಮೆರೆದಿದ್ದಾರೆ.

ಮೊಬೈಲ್​ ಹಿಂದುರುಗಿಸಿ ಪ್ರಾಮಾಣಿಕತೆ ಮೆರೆದ 108 ಸಿಬ್ಬಂದಿ

ಕಾಳಪ್ಪ ಎನ್ನುವ ಬೈಕ್ ಸವಾರ ಸಿಂಧನೂರಿನಿಂದ ರಾಯಚೂರು ಕಡೆ ಬರುತ್ತಿದ್ದರು. ಮಾರ್ಗ ಮಧ್ಯ ಸಾಥ್ ಮೈಲ್ ಕ್ರಾಸ್ ಬಳಿ ರಸ್ತೆಯಲ್ಲಿ ಎಮ್ಮೆ ಅಡ್ಡ ಬಂದ ಪರಿಣಾಮ ರಸ್ತೆ ಅಪಘಾತ ಸಂಭವಿಸಿದೆ. ಆಗ ಸ್ಥಳಕ್ಕೆ ಬಂದ 108 ಆರೋಗ್ಯ‌ ಕವಚದ ಆ್ಯಂಬುಲೆನ್ಸ್​​​ ಸಿಬ್ಬಂದಿಗಳಾದ ವಿಶ್ವನಾಥ, ಚಾಲಕ ಹುಸೇನ್ ಸಾಬ್ ಗಾಯಾಳುವನ್ನು ಪ್ರಥಮ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆ‌ಗೆ ಚಿಕಿತ್ಸೆ ದಾಖಲಿಸಿದ್ದಾರೆ.

ಈ ವೇಳೆ ಗಾಯಗೊಂಡ ಬೈಕ್ ಸವಾರ ಕಾಳಪ್ಪ ಬಳಿ ಒಂದು ಮೊಬೈಲ್ ಹಾಗೂ 41 ಸಾವಿರ ರೂ. ಹಣ ಸಿಕ್ಕಿದ್ದು, ಆಸ್ಪತ್ರೆಗೆ ಸೇರಿದ ಬಳಿಕ ಕಾಳಪ್ಪನ ಕುಟುಂಬದ ವರ್ಗವರಿಗೆ ಹಣ ಹಾಗೂ ಮೊಬೈಲ್ ಒಪ್ಪಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details