ರಾಯಚೂರು :ಕೊರೊನಾ ಮೂರನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಸಿಂಧನೂರು ತಾಲೂಕಿನ ಪ್ರಸಿದ್ಧ ಅಂಬಾಮಠದ ಅಂಬಾದೇವಿಯ ಜಾತ್ರಾ ಮಹೋತ್ಸವವನ್ನು ರದ್ದುಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ದೇವಾಲಯ ಸಮಿತಿ ಸದಸ್ಯರು, ಸ್ಥಳೀಯ ಶಾಸಕರು, ತಾಲೂಕು ಆಡಳಿತ ಸಭೆ ನಡೆಸಿ ಜಾತ್ರೆ ರದ್ದಿಗೆ ತೀರ್ಮಾನಿಸಲಾಗಿದೆ. ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡುವುದು, ಸೋಂಕು ಹರಡದಂತೆ ತಡೆಯಲು ಅಂಬಾದೇವಿ ಜಾತ್ರೆಯನ್ನು ಈ ವರ್ಷ ನಡೆಸದಿರಲು ನಿರ್ಧರಿಸಲಾಗಿದೆ.