ರಾಯಚೂರು :ಲಾಕ್ಡೌನ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ದಂಡ ಕಟ್ಟಲು ಹೇಳಿದಾಗ ಪೊಲೀಸರೊಂದಿಗೆ ಯುವಕರು ವಾಗ್ವಾದಕ್ಕಿಳಿದ ಘಟನೆ ನಗರದಲ್ಲಿ ನಡೆದಿದೆ.
ರಾಯಚೂರು: ದಂಡ ವಿಧಿಸಿದ್ದಕ್ಕೆ ಪೊಲೀಸರೊಂದಿಗೆ ಯುವಕನ ವಾಗ್ವಾದ - VIDEO - ರಾಯಚೂರಿನಲ್ಲಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಯುವಕ
ದಂಡ ಕಟ್ಟಲು ಹೇಳಿದ್ದಕ್ಕಾಗಿ ಪೊಲೀಸರೊಂದಿಗೆ ಯುವಕರು ವಾಗ್ವಾದಕ್ಕಿಳಿದ ಘಟನೆ ರಾಯಚೂರು ನಗರದಲ್ಲಿ ನಡೆದಿದೆ.

ಕೊರೊನಾ ನಿಯಂತ್ರಿಸುವ ಸಲುವಾಗಿ ರಾಯಚೂರು ಮತ್ತು ಸಿಂಧನೂರು ನಗರಗಳನ್ನು ಲಾಕ್ಡೌನ್ ಮಾಡಲಾಗಿದೆ. ಆದರೆ, ಸಾರ್ವಜನಿಕರು ಅದ್ಯಾವುದನ್ನೂ ಲೆಕ್ಕಿಸದೇ ಅನಾವಶ್ಯಕ ಓಡಾಟ ಮಾಡುತ್ತಿದ್ದಾರೆ. ಹೀಗೆ ಅನಗತ್ಯ ಓಡಾಟ ಮಾಡುತ್ತಿದ್ದ ಕಾರೊಂದನ್ನು ತಡೆದ ಪೊಲೀಸರು ನಿಯಮ ಉಲ್ಲಂಘಿಸಿದ್ದಕ್ಕಾಗಿ ದಂಡ ಪಾವತಿಸುವಂತೆ ತಿಳಿಸಿದ್ದಾರೆ. ಈ ವೇಳೆ, ಕಾರಿನಲ್ಲಿದ್ದ ಇಬ್ಬರು ಯುವಕರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ಅಲ್ಲದೇ, ಓರ್ವ ಮೊಬೈಲ್ನಲ್ಲಿ ವಿಡಿಯೋ ಮಾಡಲು ಮುಂದಾಗಿದ್ದ.
ಯುವಕನ ವರಸೆಯಿಂದ ಕೋಪಗೊಂಡ ಪೊಲೀಸರು ಆತನ ಕೈಯಿಂದ ಮೊಬೈಲ್ ಕಸಿದುಕೊಂಡರು. ಅಲ್ಲದೇ, ಆತನ ವಾಹನವನ್ನು ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ.